ಬೆಂಗಳೂರು : ಪೂಜೆ ಹೆಸರಲ್ಲಿ ಚಿನ್ನ ದೋಚುತ್ತಿದ್ದ ಮಂತ್ರವಾದಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ನಗರದ ಜಾಮಲ್ಷಾ ನಗರದ ಆರೋಪಿ ದಾದಾಪೀರ್ ಬಂಧಿತ ಎಂದು ಗುರುತಿಸಲಾಗಿದೆ.
ಆರೋಪಿಯಿಂದ 53 ಲಕ್ಷ ರೂ ಮೌಲ್ಯದ 485 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಈತನ ವಿರುದ್ಧ ಬೆಂಗಳೂರು. ಶಿವಮೊಗ್ಗ. ಬೆಂಗಳೂರು ಮಾತ್ರವಲ್ಲದೇ ಆಂಧ್ರಪ್ರದೇಶದಲ್ಲೂ ಪ್ರಕರಣ ದಾಖಲಾಗಿದೆ.
ಪೂಜೆ ಮಾಡಿಸುತ್ತೇನೆ, ನಿಧಿ ತೋರಿಸುತ್ತೇನೆ ಎಂದು ಜನರಿಗೆ ಮಂಕುಬೂದಿ ಎರಚಿ ಚಿನ್ನ ದೋಚುವುದು ಈತನ ಕೆಲಸವಾಗಿತ್ತು. ನಿಮಗೆ ಯಾರೋ ಮಾಟ ಮಂತ್ರ ಮಾಡಿದ್ದಾರೆ, ಅದಕ್ಕೆ ನೀವು ಏಳಿಗೆ ಆಗುತ್ತಿಲ್ಲ. ನಾನು ಹೇಳಿದಂತೆ ಪೂಜೆ ಮಾಡಿಸಿದರೆ ಒಳ್ಳೆದಾಗುತ್ತದೆ ಎಂದು ನಂಬಿಸುತ್ತಿದ್ದನು. ಆಭರಣ ತಂದು ಚೆಂಬಿನಲ್ಲಿಡಬೇಕು, ಪೂಜೆ ಆದ ಬಳಿಕ 45 ದಿನ ಅದನ್ನು ತೆರೆಯಬಾರದು ಎಂದು ಹೇಳುತ್ತಿದ್ದ. ಪೂಜೆ ನೆಪದಲ್ಲಿ ಹೊಗೆ ಹಾಕಿ ಚಿನ್ನಾಭರಣ ಬ್ಯಾಗ್ ಗೆ ತುಂಬಿಕೊಂಡು ಎಸ್ಕೇಪ್ ಆಗುತ್ತಿದ್ದನು. ದಾದಾಪೀರ್ ಗೆ ಮೂರು ಬಾರಿ ಮದುವೆಯಾಗಿದ್ದು, ಬಂದ ಹಣದಿಂದ ಸುಖ ಜೀವನ ನಡೆಸುತ್ತಿದ್ದನು.