ರಾಯ್ಪುರ: ಛತ್ತೀಸ್ ಗಢದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದೆ. ಭದ್ರತಾಪಡೆ ಹಾಗೂ ಬಿಜಾಪುರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಕ್ಸಲರು ಅಡಗಿಸಿಟ್ಟಿದ್ದ 5 ಐಇಡಿ, ಅಪಾರ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ.
51 ಜೀವಂತ ಬಿಜಿಎಲ್ ಗಳು, 100 ಬಂಡಲ್ ಗಳ ಹೆಚ್ ಟಿ ಅಲ್ಯೂಮಿನಿಯಂ ತಂತಿ, 50 ಸ್ಟೀಲ್ ಪೈಪ್ ಗಳು, ಬಿಜಿಎಲ್ ನಿರ್ಮಾಣಕ್ಕಾಗಿ ದೊಡ್ದ ಪ್ರಮಾಣದ ವಿದ್ಯುತ್ ತಂತಿ, 20 ಕಬ್ಬಿಣದ ಹಾಳೆಗಳು ಮತ್ತು 40 ಕಬ್ಬಿಣದ ತಟ್ಟೆಗಳನ್ನು ಜಪ್ತಿ ಮಾಡಲಾಗಿದೆ.
ನಕ್ಸಲರು ಇಟ್ಟಿದ್ದ ಐದು ಐಇಡಿಗಳು ಕೂಡ ಶೋಧ ಕಾರ್ಯಾಚರಣೆ ವೇಳ್ಎ ಪತ್ತೆಯಾಗಿವೆ. ಸ್ಫೋಟಕಗಳು ಪತ್ತೆಯಾದ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.