ಶಿವಮೊಗ್ಗ: ಟ್ರಾಫಿಕ್ ಚಲನ್ ಹೆಸರಲ್ಲಿ ಪೊಲೀಸ್ ಸಿಬ್ಬಂದಿಗೆ ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಪೊಲೀಸ್ ಸಿಬ್ಬಂದಿಯೊಬ್ಬರ ವಾಟ್ಸಪ್ ಗೆ ಟ್ರಾಫ್ಕ್ ಚಲನ್ ಎಂದು ಎಪಿಕೆ ಫೈಲ್ ಬಂದಿದೆ. ತಮ್ಮ ವಾಹನ ಮೇಲೆ ದಂಡವಿರಬಹುದು ಎಂಬ ಕಾರಣಕ್ಕೆ ಅದನ್ನು ಡೌನ್ ಲೋಡ್ ಮಾಡಿಕೊಂಡು ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ಮಾಹಿತಿ ಅದರಲ್ಲಿ ಇರಲಿಲ್ಲ.
ಕೆಲ ದಿನಗಳ ಬಳಿಕ ಪೊಲೀಸ್ ಸಿಬ್ಬಂದಿಯ ಬ್ಯಾಂಕ್ ಖಾತೆಯಿಂದ 1.47 ಲಕ್ಷ ರೂ ಡ್ರಾ ಆಗಿದೆ. ಎಪಿಕೆ ಫೈಲ್ ಮೂಲಕ ಅವರ ಬ್ಯಾಂಕ್ ದಾಖಲೆ ಮಾಹಿತಿ ಪಡೆದು ಸೈಬರ್ ವಂಚಕರು ಹಣ ದೋಚಿದ್ದಾರೆ.
ಹಣ ಕಳೆದುಕೊಂಡು ಕಂಗಾಲಾಗಿರುವ ಪೊಲೀಸ್ ಸಿಬ್ಬಂದಿ ಸದ್ಯ ಶಿವಮೊಗ್ಗದ ಸಿಇನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.