ಬೆಂಗಳೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಿರುವ ಸಮೀಕ್ಷಾದಾರರ ಮತ್ತು ಮೇಲ್ವಿಚಾರಕರ ಮಾಹಿತಿಯನ್ನು ಒದಗಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (1) ರಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರಿಗೆ ಉಲ್ಲೇಖ (2) ರಲ್ಲಿ ಈ ಕೆಳಕಂಡಂತೆ ಗೌರವಧನವನ್ನು ನಿಗದಿಪಡಿಸಿ ಆದೇಶಿಸಿದೆ.
ಮೊದಲನೇ ಕಂತಿನಲ್ಲಿ ತಲಾ ರೂ. 5,000/- ದಂತೆ ಸಮೀಕ್ಷಾದಾರರಿಗೆ ಗೌರವಧನ ಪಾವತಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಸಮೀಕ್ಷಾದಾರರಿಗೆ ಬಾಕಿ ಮೊತ್ತ ಹಾಗೂ ಮೇಲ್ವಿಚಾರಕರಿಗೆ ನಿಗದಿಪಡಿಸಿದ ಗೌರವಧನವನ್ನು ಬಿಡುಗಡೆ ಮಾಡಬೇಕಾಗಿದ್ದು, ಈ ಕೆಳಕಂಡ ನಮೂನೆಯಲ್ಲಿ ಮಾಹಿತಿ ಒದಗಿಸಲು ಕೋರಿದೆ. ಒಂದು ಬ್ಲಾಕ್ ಗೆ ಒಂದಕ್ಕಿಂತ ಹೆಚ್ಚು ಸಮೀಕ್ಷಾದಾರರನ್ನು ನೇಮಿಸಿದ್ದಲ್ಲಿ, ಪ್ರತಿ ಬ್ಲಾಕ್‌ಗೆ ನಿಗದಿಪಡಿಸಿರುವ Lump-sum ಮೊತ್ತವನ್ನು ಸಮೀಕ್ಷಾದಾರರಿಗೆ ವಿಭಜಿಸಿ ನೀಡಬೇಕಾಗಿರುತ್ತದೆ.

