ದುರ್ಗಾಪುರ ಸಾಮೂಹಿಕ ಅತ್ಯಾಚಾರದ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ವಿರೋಧ ಪಕ್ಷಗಳಿಂದ ಆಕ್ರೋಶ ವ್ಯಕ್ತವಾದ ನಡುವೆ ಮತ್ತೊಬ್ಬ ಟಿಎಂಸಿ ನಾಯಕ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಮಹಿಳೆ ತಡರಾತ್ರಿ ಹೊರಗೆ ಹೋಗಬಾರದು ಮತ್ತು ಪೊಲೀಸರು ಇಂಚಿಂಚೂ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರದ ಕುರಿತು ಮಾತನಾಡಿದ ಟಿಎಂಸಿ ಸಂಸದ ಸೌಗತ ರಾಯ್, ಘಟನೆ ಬೆಳಕಿಗೆ ಬಂದ ನಂತರವೇ ಪೊಲೀಸರು ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು. ಮಹಿಳೆಯರು ಜಾಗರೂಕರಾಗಿರಬೇಕು ಎಂದು ಅವರು ಒತ್ತಾಯಿಸಿದರು.
ಶುಕ್ರವಾರ ರಾತ್ರಿ ದುರ್ಗಾಪುರದ ತನ್ನ ಸಂಸ್ಥೆಯ ಕ್ಯಾಂಪಸ್ನ ಹೊರಗೆ ಒಡಿಶಾದ ಜಲೇಶ್ವರದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯ ಮೇಲೆ ಕೆಲವು ಪುರುಷರು ಅತ್ಯಾಚಾರ ಎಸಗಿದ ಆರೋಪದ ಎರಡು ದಿನಗಳ ನಂತರ ಈ ಹೇಳಿಕೆ ಬಂದಿದೆ.
ಮಮತಾ ಹೇಳುವಂತೆ ದುರ್ಗಾಪುರ ಸಂತ್ರಸ್ತೆ ಮಧ್ಯರಾತ್ರಿ 12.30 ಕ್ಕೆ ಹೊರಗೆ ಬಂದಿದ್ದಾಳೆಯೇ? ಪೊಲೀಸ್ ವರದಿ ಏನು ಬಹಿರಂಗಪಡಿಸುತ್ತದೆ “ಇಂತಹ ಪ್ರಕರಣಗಳು ಬಂಗಾಳದಲ್ಲಿ ಅಪರೂಪ. ಬಂಗಾಳದಲ್ಲಿ ಮಹಿಳಾ ಸುರಕ್ಷತೆ ಇತರ ಯಾವುದೇ ರಾಜ್ಯಗಳಿಗಿಂತ ಉತ್ತಮವಾಗಿದೆ… ಆದರೆ ಪೊಲೀಸರು ಎಲ್ಲೆಡೆ ಗಸ್ತು ತಿರುಗಲು ಸಾಧ್ಯವಾಗದ ಕಾರಣ ಮಹಿಳೆಯರು ತಡವಾಗಿ ತಮ್ಮ ಕಾಲೇಜುಗಳನ್ನು ಬಿಡಬಾರದು” ಎಂದು ತಿಳಿಸಿದರು.
#WATCH | Kolkata, West Bengal: On the Durgapur alleged gang rape case, TMC MP Saugata Roy says, "Such cases are rare in Bengal. Women's safety in Bengal is better than in any other place… But women shouldn't leave their colleges so late at night, as the police can't patrol… pic.twitter.com/PVFeTBYC5p
— ANI (@ANI) October 13, 2025