ಆರ್.ಎಸ್.ಎಸ್ ನಿಷೇಧದ ಗೀಳು ಬಿಟ್ಟು ಉತ್ತರ ಕರ್ನಾಟಕದ ನೆರೆ ಪೀಡಿತ ರೈತರ ಸಂಕಷ್ಟದ ಗೋಳು ಆಲಿಸಿ: ಪ್ರಿಯಾಂಕ್ ಖರ್ಗೆಗೆ ಆರ್.ಅಶೋಕ್ ತಿರುಗೇಟು

ಬೆಂಗಳೂರು: ಆರ್.ಎಸ್.ಎಸ್ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ವಿಚಾರವಾಗಿ ಕಿಡಿಕಾರಿರುವ ವಿಪಕ್ಷ ನಾಯಕ ಆರ್.ಅಶೋಕ್, ಆರ್.ಎಸ್. ಎಸ್ ನಿಷೇಧ ಮಾಡಬೇಕು ಎಂಬ ಗೀಳು ಬಿಟ್ಟು ನೆರೆಯಿಂದ ತತ್ತರಿಸಿರುವ ಉತ್ತರ ಕರ್ನಾಟಕದ ರೈತರ, ಜನರ ಸಂಕಷ್ಟ ಆಲಿಸಿ ಎಂದು ತಿರುಗೇಟು ನೀಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ನೆರೆಬಾಧಿತ ರೈತರ ಗೋಳು ಹೇಳತೀರದು. ಇಲ್ಲಿ ಮರಿ ಖರ್ಗೆ ಅವರಿಗೆ RSS ನಿಷೇಧ ಮಾಡುವ ಗೀಳು! ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ರೈತರು ನೆರೆಯಿಂದ ಕಂಗಾಲಾಗಿದ್ದಾರೆ. ಹಸಿರು ಬರ ಘೋಷಣೆ ಮಾಡಿ, ಎಕರೆಗೆ 25,000 ರೂಪಾಯಿ ಪರಿಹಾರ ಕೊಡಿ, ಸಾಲ ಮನ್ನಾ ಮಾಡಿ ಎಂದು ಅನ್ನದಾತರು ಬೀದಿಗಿಳಿದು ಪ್ರತಿಭಟನೆ, ಬಂದ್ ಮಾಡುತ್ತಿದ್ದಾರೆ. ಆದರೆ ಇಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರ್ ಎಸ್ಎಸ್ ಬಗ್ಗೆ ಸಿಎಂಗೆ ಪತ್ರ ಬರೆದು ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಆರ್. ಎಸ್.ಎಸ್ ನಿಷೇಧ ಮಾಡುವ ನಿಮ್ಮ ಗೀಳು ಬಿಡಿ. ಈ ಕೂಡಲೇ ಮುಖ್ಯಮಂತ್ರಿಗಳ ಮನವೊಲಿಸಿ ನೆರೆ ಪೀಡಿತ ಪ್ರದೇಶಗಳಲ್ಲಿ ಹಸಿರು ಬರ ಘೋಷಣೆ ಮಾಡಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಿ. ಜನ ನಿಮಗೆ ಅಧಿಕಾರ ಕೊಟ್ಟಿರೋದು ಬರೀ ರಾಜಕಾರಣ ಮಾಡೋದಕ್ಕೆ ಅಲ್ಲ. ಆರ್. ಎಸ್.ಎಸ್ ಬಗ್ಗೆ ನಿಮ್ಮ ಖಯಾಲಿ ಬಿಟ್ಟು ನಿಮ್ಮ ಜವಾಬ್ದಾರಿ ನಿರ್ವಹಿಸಿ ಎಂದು ಸಲಹೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read