BIG NEWS : ರಾಜ್ಯದಲ್ಲಿ ‘ಅನ್ನಭಾಗ್ಯ’ದ ಅಕ್ಕಿ ಜೊತೆ ಸಿಗಲಿದೆ ಇಂದಿರಾ ಕಿಟ್ ! ಏನೇನಿರಲಿದೆ ಗೊತ್ತಾ.?

ಬೆಂಗಳೂರು : ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಇನ್ನು 10 ಕೆಜಿ ಬದಲಿಗೆ ಐದು ಕೆಜಿ ಅಕ್ಕಿ ವಿತರಿಸಲಾಗುವುದು. ಇದರೊಂದಿಗೆ ತೊಗರಿ ಬೇಳೆ, ಹೆಸರು ಕಾಳು, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಇಂದಿರಾ ಆಹಾರ ಕಿಟ್ ತಲಾ ಒಂದು ಕೆಜಿ ತೊಗರಿಬೇಳೆ, ಹೆಸರು ಕಾಳು, ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ಸಕ್ಕರೆ, ಉಪ್ಪು ಹೊಂದಿರುತ್ತದೆ. ಈ ಆಹಾರ ಕಿಟ್ ಹಂಚಿಕೆಯನ್ನು ಪಡಿತರ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಇಂದಿರಾ ಕಿಟ್ ವಿತರಣೆ ಮಾಡಲಾಗುತ್ತಿದೆ.
10 ಕೆ.ಜಿ ಅಕ್ಕಿ ಬದಲು 5 ಕೆ.ಜಿ ಅಕ್ಕಿ ಹಾಗೂ ಇಂದಿರಾ ಕಿಟ್ನಲ್ಲಿ 1ಕೆ.ಜಿ ತೊಗರಿಬೇಳೆ 1ಕೆ.ಜಿ ಹೆಸರುಕಾಳು, 1 ಲೀಟರ್ ಅಡುಗೆ ಎಣ್ಣೆ, 1ಕೆ.ಜಿ ಸಕ್ಕರೆ, 1ಕೆ.ಜಿ ಉಪ್ಪು ಇರಲಿದೆ.

ಒಬ್ಬರು ಅಥವಾ ಇಬ್ಬರು ಇರುವ ಕುಟುಂಬಕ್ಕೆ ತಲಾ ಅರ್ಧ ಕೆ.ಜಿಯಂತೆ 2.5 ಕೆ.ಜಿ ಕಿಟ್ ವಿತರಣೆ. ಮೂವರು ಅಥವಾ ನಾಲ್ವರು ಇರುವ ಕುಟುಂಬಕ್ಕೆ 5 ಕೆ.ಜಿ ತೂಕದ ಕಿಟ್ ವಿತರಣೆ. ಐವರು ಅಥವಾ ಅದಕ್ಕಿಂತ ಹೆಚ್ಚು ಜನರು ಇರುವ ಕುಟುಂಬಕ್ಕೆ ತಲಾ 1.5 ಕೆ.ಜಿಯಂತೆ 7.5 ಕೆ.ಜಿಯ ಆಹಾರ ಕಿಟ್ ವಿತರಣೆ ಮಾಡಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read