ಬೆಳಗಾವಿ: ಸ್ನಾನಕ್ಕೆಂದು ಚೆಕ್ ಡ್ಯಾಂ ಗೆ ಇಳಿದಿದ್ದ ಇಬ್ಬರು ಮಕ್ಕಳು ಈಜುಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಉದಪುಡಿ ಗ್ರಾಮದಲ್ಲಿ ನಡೆದಿದೆ.
ಈರಣ್ಣ ಶಿರಸಂಗಿ (13) ಹಾಗೂ ಗುರವ್ವ ಶಿರಸಂಗಿ (11) ಮೃತ ಮಕ್ಕಳು. ಈಜು ಬಾರದೇ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮಕ್ಕಳ ತಂದೆ ಸಿದ್ದಪ್ಪ ಶಿರಸಂಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹನುಮಂತ ಪಾಟೀಲ್ ಎಂಬುವವರ ಜಮೀನಿಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಕಟಕೋಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.