ಅಯೋಧ್ಯೆ ಸರಯೂ ನದಿ ದಡದಲ್ಲಿ ದೀಪೋತ್ಸವ: ಬೆಳಗಲಿವೆ ದಾಖಲೆಯ 28 ಲಕ್ಷ ಹಣತೆ

ಅಯೋಧ್ಯೆ: ಅಯೋಧ್ಯೆಯ ಸರಿಯೂ ನದಿ ದಡದಲ್ಲಿ ಒಂಬತ್ತನೇ ಆವೃತ್ತಿಯ ದೀಪೋತ್ಸವ ಅಂಗವಾಗಿ ಅಕ್ಟೋಬರ್ 19 ರಂದು 28 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು.

ಸರಯೂ ನದಿ ದಡದಲ್ಲಿನ 56 ಘಾಟ್ ಗಳಲ್ಲಿ 28 ಲಕ್ಷ ದೀಪ ಬೆಳಗಿಸಲಾಗುವುದು. ಇದೇ ಮೊದಲ ಬಾರಿಗೆ ಲಕ್ಷ್ಮಣ ಕಿಲ್ಲಾ ಘಾಟ್ ನಲ್ಲಿ 1.25 ಲಕ್ಷ ದೀಪ ಬೆಳಗಲಿವೆ. ರಾಮ್ ಕಿ ಪೈಡಿ, ಚೌಧರಿ ಚರಣ್ ಸಿಂಗ್ ಘಾಟ್, ಭಜನ್ ಸಂಧ್ಯಾ ಘಾಟ್ ಗಳಲ್ಲಿ ದೀಪಗಳನ್ನು ಬೆಳಗಿಸಲಾಗುವುದು.

ಕಳೆದ ವರ್ಷ ಅಯೋಧ್ಯೆ ದೀಪೋತ್ಸವ ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿತ್ತು. ಈ ವರ್ಷ 28 ಲಕ್ಷ ದೀಪ ಬೆಳಗಿಸುವ ಮೂಲಕ ಕಳೆದ ವರ್ಷದ ದಾಖಲೆ ಅಳಿಸಿ ಹಾಕುವ ಗುರಿ ಹೊಂದಲಾಗಿದೆ. ದೀಪೋತ್ಸವದ ಯಶಸ್ವಿಗಾಗಿ ಉತ್ತರ ಪ್ರದೇಶ ಸರ್ಕಾರ ಮತ್ತು ಸ್ಥಳೀಯ ಆಡಳಿತ ಸಕಲ ಸಿದ್ಧತೆ ಕೈಗೊಂಡಿವೆ.

ಡಾ. ರಾಮ ಮನೋಹರ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಂತ ಶರಣ್ ಮಿಶ್ರಾ ಅವರನ್ನು ದೀಪೋತ್ಸವದ ನೋಡೆಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಅವರು 22 ಸಮಿತಿ ರಚಿಸಿದ್ದು, ಸುಮಾರು 30 ಸಾವಿರ ಸ್ವಯಂಸೇವಕರು ದೀಪೋತ್ಸವದಲ್ಲಿ ಭಾಗವಹಿಸಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read