ರಾಮನಗರ: ಭೂ ವಿವಾದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಗೆಂಡೆಕೆರೆ ಗ್ರಾಮದ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕಲ್ಲಿನಿಂದ ಹೊಡೆದು ಯುವಕನನ್ನು ಕೊಲೆ ಮಾಡಲಾಗಿದೆ.
ಸುನಿಲ್(30) ಕೊಲೆಯಾದ ಯುವಕರ ಎಂದು ಹೇಳಲಾಗಿದೆ. ಗೆಂಡೆಗೆರೆ ಗ್ರಾಮದ ಪಾರ್ಥಸಾರಥಿ ಮತ್ತು ಅವರ ಪುತ್ರ ಆಕಾಶ್ ಕೊಲೆ ಆರೋಪಿಗಳಾಗಿದ್ದಾರೆ. ಹತ್ಯೆಯಾದ ಸುನಿಲ್ ತಂದೆ ಮುನಿರಾಜು ಜಮೀನು ಮಾರಿದ್ದರು.
ಪಾರ್ಥಸಾರಥಿಗೆ ಒಂದೂವರೆ ಎಕರೆ ಜಮೀನು ಮಾರಾಟ ಮಾಡಿದ್ದರು. ಜಮೀನು ಮಾರಾಟದ ಬಗ್ಗೆ ವಿಚಾರಿಸಲು ಜಮೀನು ಮಾರಿದ್ದ ಮುನಿರಾಜು ಮಕ್ಕಳಾಗಿರುವ ಸುನಿಲ್ ಮತ್ತು ಕಿರಣ್ ತೆರಳಿದ್ದರು. ಈ ವೇಳೆ ಜಗಳವಾಗಿ ಪಾರ್ಥಸಾರಥಿ ಮತ್ತು ಆಕಾಶ್ ಅವರು ಮಾರಕಾಸ್ತ್ರಗಳಿಂದ ಥಳಿಸಿ ಸುನಿಲ್ ನನ್ನು ಹತ್ಯೆ ಮಾಡಿದ್ದಾರೆ. ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ಅಪ್ಪ, ಮಗನನ್ನು ಬಂಧಿಸಿದ್ದಾರೆ.