ಜೈಪುರ: ಉತ್ತರ ಪ್ರದೇಶದ ಉದ್ಯಮಿ ಅಭಿಷೇಕ್ ಗುಪ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಮಹಾಸಭಾ ರಾಷ್ಟ್ರೀಯ ನಾಯಕಿ ಪೂಜಾ ಶಕುನ್ ಪಾಂಡೆಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಭರತ್ ಪುರ ಜಿಲ್ಲೆಯ ಲೋಧಾ ಬೈಪಾಸ್ ಬಳಿ ಪೂಜಾ ಪಾಂಡೆಯನ್ನು ಬಂಧಿಸಲಾಗಿದೆ. ಈಗಾಗಲೇ ಪೂಜಾ ಪಾಂಡೆ ಪತಿ ಅಶೋಕ್ ಪಾಂಡೆ ಹಾಗೂ ಶಾರ್ಪ್ ಶೂಟರ್ ಮೊಹಮ್ಮದ್ ಫಜಲ್, ಆಸೀಫ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಪೂಜಾ ಪಾಂಡೆ ಬಂಧನವಾಗಿದೆ.
ಸೆಪ್ಟೆಂಬರ್ 26ರಂದು ಅಲಿಗಢ ನಗರದ ಹೊರವಲಯದಲ್ಲಿ ಬಸ್ ಹತ್ತುತ್ತಿದ್ದ ಉದ್ಯಮಿ ಅಭಿಷೇಕ್ ಗುಪ್ತಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಅಶೋಕ್ ಪಾಂಡೆ, ಶಾರ್ಪ್ ಶೂಟರ್ ಮೊಹಮ್ಮದ್ ಫಜಲ್, ಆಸೀಫ್ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಮೊಹಮ್ಮದ್ ಫಜಲ್, ಪೂಜಾ ಪಾಂಡೆ ಹಾಗೂ ಅವರ ಪತಿ ಅಶೋಕ್ ಪಾಂಡೆ ಸೂಚನೆ ಮೇರೆಗೆ ಅಭಿಷೇಕ್ ಗುಪ್ತಾ ಹತ್ಯೆ ಮಾಡಲಾಗಿದೆ ಎಂದು ಬಾಯ್ಬಿಟ್ಟಿದ್ದ.
ಪ್ರಕರಣದ ಬಳಿಕ ಪೂಜಾ ಪಾಂಡೆ ತಲೆಮರೆಸಿಕೊಂಡಿದ್ದರು. ಅವರ ಬಗ್ಗೆ ಸುಳಿವು ನೀಡಿದವರಿಗೆ 50,000 ಬಹುಮಾನ ಘೋಷಿಸಲಾಗಿತ್ತು. ಇದೀಗ ಪೂಜಾ ಪಾಂಡೆಯನ್ನು ಬಂಧಿಸಲಾಗಿದೆ.