ಬೆಂಗಳೂರು: ಪ್ರಿಯತಮೆಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಪ್ರಿಯಕರನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಶ್ರೇಯಸ್ ಬಂಧಿತ ಆರೋಪಿ. ಪ್ರಿಯತಮೆ ತನಗೆ ಚಿನ್ನದ ಓಲೆ ಮಾಡಿಸಿಕೊಡು ಎಂದು ಕೇಳಿದ್ದಳು. ಪ್ರಿಯತಮೆಗೆ ಓಲೆ ಕೊಡಿಸಲೆಂದು ಶ್ರೇಯಸ್ ಮನೆಗಳ್ಳತನ ಮಾಡುತ್ತಿದ್ದ. ಹರೀಶ್ ಎಂಬುವವರ ಮನೆಯಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಹೆಬ್ಬಗೋಡಿ ಪೊಲೀಸರು ಕಳ್ಳ ಶ್ರೇಯಸ್ ನನ್ನು ಬಂಧಿಸಿದ್ದಾರೆ. ಬಂಧಿತನಿಂದ 415ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.