ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲ, ಸಮಾಜದ ಶಕ್ತಿ : ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯ ಕೋರಿದ CM ಸಿದ್ದರಾಮಯ್ಯ


ಬೆಂಗಳೂರು : ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲ, ಸಮಾಜದ ಶಕ್ತಿ ಎಂದು ಸಿಎಂ ಸಿದ್ದರಾಮಯ್ಯ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯ ಕೋರಿದ್ದಾರೆ.

ಮನೆ, ಮನ ಬೆಳಗುವ ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲ, ಸಮಾಜದ ಶಕ್ತಿ ಕೂಡ ಆಗಿದ್ದಾಳೆ. ಹೆಣ್ಣುಮಕ್ಕಳು ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ಸಾಧನೆ ಮಾಡಿದರೂ, ಇಂದಿಗೂ ಲಿಂಗತಾರತಮ್ಯವೆಂಬುದು ಸಮಾಜದಲ್ಲಿ ಜೀವಂತವಿದೆ ಎನ್ನುವುದನ್ನು ಒಪ್ಪಿಕೊಂಡು, ಅವರು ಎದುರಿಸುತ್ತಿರುವ ಸವಾಲು ಹಾಗೂ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರೂ ಸಹ ಜೊತೆಗೂಡಬೇಕು. ಯಾವುದೇ ತೆರನಾದ ಅಸಮಾನತೆ, ಶೋಷಣೆಯಿಲ್ಲದ, ಸಮಾನ ಗೌರವ, ಅವಕಾಶ ಹಾಗೂ ಸ್ವಾತಂತ್ರ್ಯವನ್ನು ಕಲ್ಪಿಸಿಕೊಡುವ ಸಮಸಮಾಜ ನಿರ್ಮಾಣ ನಮ್ಮ ಸಂಕಲ್ಪವಾಗಲಿ ಎಂದು ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಸಂದರ್ಭದಲ್ಲಿ ಆಶಿಸುತ್ತೇನೆ. ನಾಡಿನ ನನ್ನೆಲ್ಲಾ ಪ್ರೀತಿಯ ಅಕ್ಕ ತಂಗಿಯರಿಗೆ, ತಾಯಂದಿರಿಗೆ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು. ನಿಮ್ಮ ಜೊತೆ ಕರ್ನಾಟಕ ಸರ್ಕಾರ ಸದೃಢವಾಗಿ ನಿಂತಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read