ಬೆಳಗಾವಿ: ಮಗಳು ಪ್ರಿಯಕರನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಕ್ಕೆ ಮನನೊಂದ ತಂದೆಯೊಬ್ಬ ಮಗಳ ತಿಥಿ ಮಾಡಿ ಊರವರಿಗೆ ಊಟ ಬಡಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮಗಳು ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಪ್ರಿಯಕರನೊಂದೊಗೆ ಓಡಿ ಹೋಗಿದ್ದು, ಮನೆ ಬಿಟ್ಟು ಹೋಗಿದ್ದಾಳೆ. ಇದರಿಂದ ಮಗಳು ತಮ್ಮ ಪಾಲಿಗೆ ಸತ್ತು ಹೋದಳು ಎಂದು ಆಕೆಯ ತಂದೆ ಊರ ತುಂಬೆಲ್ಲ ಮಗಳ ತಿಥಿ ಬ್ಯಾನರ್ ಹಾಕಿದ್ದು, ಮಗಳ ತಿಥಿ ಮಾಡಿ ಊರವರಿಗೆ ಊಟ ಬಡಿಸಿರುವ ವಿಚಿತ್ರ ಘಟನೆ ನಡೆದಿದೆ.
ಸುಷ್ಮಿತಾ ಪ್ರಿಯಕರನೊಂದಿಗೆ ಮನೆಬಿಟ್ಟು ಹೋಗಿರುವ ಯುವತಿ. ಮಗಳ ನಡೆಯಿಂದ ತೀವ್ರವಾಗಿ ಮನ ನೊಂದ ಸುಷ್ಮಿತಾ ತಂದೆ ಮನೆಯಲ್ಲಿ ಮಗಳ ತಿಥಿ ಮಾಡಿದ್ದಾರೆ.