ನವದೆಹಲಿ: ಪುಣೆಯಿಂದ ದೆಹಲಿಗೆ ಹೊರಟಿದ್ದ ಆಕಾಶ್ ಏರ್ ವಿಮಾನಕ್ಕೆ ಹಕ್ಕಿ ಡಿಕ್ಕಿಹೊಡೆದಿದೆ. ಪರಿಣಾಮ ವಿಮಾನ ಪುಣೆ ನಿಲ್ದಾಣಕ್ಕೆ ವಾಪಸ್ ಆಗಿರುವ ಘಟನೆ ನಡೆದಿದೆ.
ಪುಣೆಯಿಂದ ದೆಹಲಿಗೆ ಅಕ್ಟೋಬರ್ 10ರಂದು ಹೊರಟಿದ್ದ ವಿಮಾನಕ್ಕೆ ಏಕಾಏಕಿ ಹಕ್ಕಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ವಿಮಾನ ಸುರಕ್ಷಿತವಾಗಿ ಕೆಳಗಿಳಿದಿದೆ. ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ ಎಂದು ವಿಮಾನ ಯಾನ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರಿಗೆ ವಿಮಾನ ಸಂಸ್ಥೆ ಪರ್ಯಾಯ ವ್ಯಸ್ಥೆಗಳನ್ನು ಮಾಡಿದೆ. ಹಕ್ಕಿ ಡಿಕ್ಕಿ ಹೊಡೆದ ವಿಮಾನ ದೆಹಲಿಯಿಂದ ಗೋವಾಕ್ಕೆ ಹಾರಾಟ ನಡೆಸಬೇಕಿತ್ತು. ಈ ಮಾರ್ಗಕ್ಕೆ ಮತ್ತೊಂದು ವಿಮಾನವನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.