ಬೆಂಗಳೂರು : ಪತಿಯ ಪರಸ್ತ್ರೀ ಸಂಗಕ್ಕೆ ಬೇಸತ್ತು ಇಬ್ಬರು ಮಕ್ಕಳನ್ನು ಕೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಭುವನೇಶ್ವರಿ ನಗರದ ನಿವಾಸಿ ವಿಜಯಲಕ್ಷ್ಮಿ (35) ಆಕೆಯ ಮಗಳು ಬೃಂದಾ (4) ಹಾಗೂ ಭುವನ್ (1.5) ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಮಕ್ಕಳಿಗೆ ನೇಣು ಬಿಗಿದು ಕೊಂದ ತಾಯಿ ಬಳಿಕ ತಾನೂ ಕೂಡ ಸೂಸೈಡ್ ಮಾಡಿಕೊಂಡಿದ್ದಾರೆ. ಪರಸ್ತ್ರೀ ಸಹವಾಸ ಮಾಡಿದ್ದ ಪತಿ ರಮೇಶ್ ತನಗೆ ಡೈವೋರ್ಸ್ ಕೊಡು ಎಂದು ಕಾಟ ಕೊಡುತ್ತಿದ್ದನು ಎನ್ನಲಾಗಿದೆ. ಇದರಿಂದ ಮನನೊಂದ ವಿಜಯಲಕ್ಷ್ಮಿ 5 ವರ್ಷದ ಪುತ್ರಿ ಹಾಗೂ 1.5 ವರ್ಷದ ಪುತ್ರನನ್ನು ಕೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯಚೂರು ಮೂಲದ ವಿಜಯಲಕ್ಷ್ಮಿ ಮಕ್ಕಳನ್ನು ಕೊಂದು ಸೂಸೈಡ್ ಮಾಡಿಕೊಂಡಿದ್ದು, ಸಹೋದರಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ವಿಜಯಲಕ್ಷ್ಮಿ ಪತಿ ಖಾಸಗಿ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದರು..