ಬೆಂಗಳೂರು : ಬೆಂಗಳೂರಲ್ಲಿ ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಎಫ್ ಐ ಆರ್ ದಾಖಲಾಗಿದೆ.
ಪೌರ ಕಾರ್ಮಿಕ ನಾಗೇಂದ್ರ ದೂರು ಆಧರಿಸಿ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ. ಶ್ರೀನಿವಾಸನಗರ ಸಮೀಪ ಈ ಘಟನೆ ನಡೆದಿದೆ.
ಬೈಕ್ ನಲ್ಲಿ ಬಂದ ಅಪ್ಪ-ಮಗಳು ಸ್ವಚ್ಚಗೊಳಿಸಿದ ಜಾಗದಲ್ಲಿ ಕಸ ಹಾಕಲು ಮುಂದಾಗಿದ್ದಾರೆ. ಇದನ್ನು ನಾಗೇಂದ್ರ ಪ್ರಶ್ನಿಸಿದ್ದಾರೆ. ಕಸ ಹಾಕುವ ಗಾಡಿ ಬರುತ್ತೆ, ಅದಕ್ಕೆ ಕಸ ಹಾಕಿ. ಸ್ವಚ್ಚಗೊಳಿಸಿದ ಜಾಗದಲ್ಲಿ ಕಸ ಹಾಕಬೇಡಿ ಎಂದಿದ್ದಾರೆ. ಅಷ್ಟಕ್ಕೆ ಅಪ್ಪ ಮಗಳು ಕಾರ್ಮಿಕ ನಾಗೇಂದ್ರನ ಮೇಲೆ ಹಲ್ಲೆ ನಡೆಸಿದ್ದಾರೆ. ನೀನು ಕಸ ಹಾಕುವವನು..ನಮಗೆ ಆರ್ಡರ್ ಮಾಡುತ್ತೀಯಾ ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.