ಬೆಳಗಾವಿ: ಆಸ್ತಿ ವಿಚಾರವಾಗಿ ಪತಿ ಹಾಗೂ ಪತ್ನಿ ನಡುವೆ ಆರಮ್ಭವಾಗಿದ್ದ ಗಲಾಟೆ ತಾರಕ್ಕೇರಿದ್ದು, ಕೋಪದ ಬರದಲ್ಲಿ ಪತ್ನಿ, ಪತಿಯ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಪೊಗತ್ಯಾನಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಶಿವನಗೌಡ ಪಾಟೀಲ್ ಹಾಗೂ ಪತ್ನಿ ಸಾವಿತ್ರಿ ನಡುವೆ ಹಣಕಾಸು ಹಾಗೂ ಆಸ್ತಿ ವಿಚಾರವಾಗಿ ಆಗಾಗ ಜಗಳವಗುತ್ತಿತ್ತು. ಇಂದು ಕೂಡ ಇದೇ ವಿಚಾರವಗಿ ಗಂಡ-ಹೆಂಡತಿ ನಡುವೆ ಗಲಾಟೆಯಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು ಪತ್ನಿ ರೌದ್ರಾವತಾರ ತಾಳಿದ್ದಾಳೆ.
ಮನೆಯ ಮುಂದಿದ್ದ ಪತಿಯ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಬೆಂಕಿಯ ಕೆನ್ನಾಲಿಗೆಗೆ ಕಾರು ಧಗ ಧಗನೆ ಹೊತ್ತಿ ಉರಿದಿದೆ. ಎಲ್ಲರ ಕಣ್ಣೆದುರೇ ಕಾರು ಸುಟ್ಟು ಕರಕಲಾಗಿದೆ.