ಬೆಳಗಾವಿ: ಮನೆಯಲ್ಲಿದ್ದ ಮಂಚದ ಕೆಳಗಿದ್ದ ಪೆಟ್ಟಿಗೆಯಲ್ಲಿ ಮಹಿಳೆಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಮಡ್ಡಿ ಪ್ಲಾಟ್ ನಿವಾಸಿ ಸಾಕ್ಷಿ ಮೃತ ಮಹಿಳೆ. ಪತಿ ಆಕಾಶ್ ಕುಂಬಾರ (24) ನೇ ಪತ್ನಿಯನ್ನು ಕೊಲೆಗೈದು ಮಂಚದ ಕೆಳಗಿದ್ದ ಪೆಟ್ಟಿಗೆಯಲ್ಲಿ ಶವ ತುಂಬಿಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕಾರಣ ಮನೆಯಲ್ಲಿ ಪತಿ ಆಕಾಶ ಇಲ್ಲ, ಊರು ಬಿಟ್ಟು ನಾಪತ್ತೆಯಾಗಿದ್ದಾನೆ. ಆತನ ಮೊಬಲ್ ಕೂಡ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.
ಆಕಾಶ್ ತಾಯಿ ಮನೆಗೆ ಬಂದು ನೋಡಿದಾಗ ದುರ್ವಾಸನೆ ಬರುತ್ತಿತ್ತು ಮಂಚದ ಕೆಳಗಿದ್ದ ಪೆಟ್ಟಿಗೆ ತೆಗೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಮನೆಯಲ್ಲಿ ದುರ್ವಾಸನೆ ಬರುತ್ತಿದ್ದರೂ ಮಾವ ಸದಾಶಿವ ಯಾಕೆ ಸುಮ್ಮನಿದ್ದ ಎಂಬುದು ಅನುಮಾನಕ್ಕೆ ಕಾರಣವಾಗಿದೆ.
ಮತ್ತೊಂದೆಡೆ ಸಾಕ್ಷಿ ಪೋಷಕರು ಪತಿ, ಅತ್ತೆ-ಮಾಅವ, ನಾದಿನಿ ಸೇರಿ ವರದಕ್ಷಿಣೆ ಕಿರುಕುಳ ನೀಡಿ ತಮ್ಮ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಮೂಡಲಗಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.