ಬೆಂಗಳೂರು: ಒಂದು ಬಾರಿ ಬಿಗ್ ಬಾಸ್ ಶೋಗೆ ನೋಟ್ಸ್ ಕೊಟ್ಟಮೇಲೆ ಅದು ಸರಿಯಾಗುವವರೆಗೂ ಬೀಗ ತೆಗೆಯುವುದು ಸೂಕ್ತವಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಅಯಪಟ್ಟಿದ್ದಾರೆ.
ಬಿಗ್ ಬಾಸ್ ಗೆ ಬೀಗ ಹಾಕಿ ಮತ್ತೆ ತೆರೆದಿರುವ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಸಚಿವರು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಅವರು, ಬಿಗ್ ಬಾಸ್ ಶೋ ನಲ್ಲಿ ನಿಯಮ ಮೀರಲಾಗಿದೆ ಎಂದು ನೋಟಿಸ್ ಕೊಟ್ಟಿದ್ದಾರೆ. ಅವರ ನೋಟಿಸ್ ಗೂ ಕ್ಯಾರೇ ಎಂದಿಲ್ಲ ಅಂತ ಬೀಗ ಹಾಕಿದರು. ಈಗ ನಿನ್ನೆ ಡಿ.ಕೆ.ಶಿವಕುಮಾರ್ ಅನುಮತಿ ಕೊಡಿ ಅಂತ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ನೋಡಿದೆ. ನನಗೆ ಗೊತ್ತಿರುವುದು ಇಷ್ಟೇ. ನಾನು ಮಾಧ್ಯಮಗಳಲ್ಲಿ ನೋಡಿಇದೆ ಅಷ್ಟೆ ಎಂದರು.
ನನ್ನ ಪ್ರಕಾರ ಒಂದು ಬಾರಿ ನೋಟಿಸ್ ಕೊಟ್ಟ ಮೇಲೆ ಅದು ಸರಿಯಾಗುವವರೆಗೂ ಮತ್ತೆ ಅವಕಾಶ ಕೊಡುವುದು ಸರಿಯಲ್ಲ. ಮಾಲಿನ್ಯ ಬೋರ್ಡ್ ಸ್ವಾಯತ್ತ ಸಂಸ್ಥೆ. ಅದರ ಕೆಲಸ ಅದು ಮಾಡಿದೆ. ಏನಾಗಿದೆ ಎಂಬ ಬಗ್ಗೆ ತಿಳಿದುಕೊಳ್ಳುತ್ತೇನೆ. ಈಗ ಏನಾಗುತ್ತಿದೆ ಎಂಬುದನ್ನು ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಿ ಎಂದರು.