BIG NEWS: ಅಬುಧಾಬಿ ಪ್ರವಾಸೋದ್ಯಮ ಪ್ರಚಾರ ಜಾಹೀರಾತು: ಹಿಜಾಬ್ ಧರಿಸಿ ಮತ್ತೆ ವಿವಾದಕ್ಕೀಡಾದ ದೀಪಿಕಾ ಪಡುಕೋಣೆ

ಅಬುದಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅಬುಧಾಬಿ ನಗರದ ಪ್ರವಾಸೋದ್ಯಮ ಪ್ರಚಾರ ಜಾಹೀರಾತಿನಲ್ಲಿ ಬಾಲಿವುಡ್ ನಟಿ ದೀಪಿಕಾಅ ಪಡುಕೋಣೆ ಹಿಜಾಬ್ ಧರಿಸುವ ಮೂಲಕ ಮತ್ತೆ ವಿವದಕ್ಕೆ ಕಾರಣರಾಗಿದ್ದಾರೆ.

ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಅಬುದಾಬಿ ಟೂರಿಸಂ ಜಾಹೀರಾತಿನ ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ಪತಿ ರಣವೀರ್ ಸಿಂಗ್ ಕೂಡ ಇದ್ದಾರೆ. ಅಬುಧಾಬಿಯ ಪ್ರವಾಸೋದ್ಯಮ ಆಕರ್ಷಣೆಯ ಭಾಗವಾಗಿ ದೀಪಿಕಾ ಹಾಗೂ ರಣವೀರ್ ಅಬುಧಾಬಿಯ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡುತ್ತಾರೆ. ಈ ವೇಳೆ ದೀಪಿಕಾ ಕೆಂಪುಬಣ್ಣದ ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದಾರೆ.

ವಿಡಿಯೋದಲ್ಲಿ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿ ಸೇರಿದಂತೆ ಅಬುಧಾಬಿಯ ಪ್ರಮುಖ ಪ್ರವಾಸೋದ್ಯದ ಆಕರ್ಷಣೆಯ ಬಗ್ಗೆ ಹೇಳಲಾಗಿದೆ. ಇದೀಗ ದೀಪಿಕಾ ಹಿಜಾಬ್ ಧರಿಸಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.

ಈ ಹಿಂದೆ 2015ರಲ್ಲಿ ದೀಪಿಕಾ ‘ಮೈ ಚಾಯ್ಸ್’ ಎಂಬ ಅಭಿಯಾನ ಆರಂಭಿಸಿ ಸುದ್ದಿಯಾಗಿದ್ದರು. ‘ನನ್ನ ಉಡುಗೆ, ನನ್ನ ಊಟ, ನನ್ನ ಇಷ್ಟಗಳು’ ಎಂದು ಸುದ್ದಿಯಾಗಿದ್ದರು. ಈಗ ಆ ವಿಡಿಯೋವನ್ನು ಅನೇಕರು ದೀಪಿಕಾಗೆ ಟ್ಯಾಗ್ ಮಾಡಿ ವೇರ್ ಇಸ್ ಯುವರ್ ಚಾಯ್ಸ್? ಎಂದು ಪ್ರಶ್ನಿಸಿದ್ದಾರೆ. ನೋವೊಬ್ಬ ನಕಲಿ ಮಹಿಳಾವಾದಿ. ನಿಮ್ಮ ಇಷ್ಟದ ಪ್ರಕಾರ ಬಟ್ಟೆ ಹಾಕುವುದಾದರೆ ಅಬುಧಾಬಿಯಲ್ಲಿ ಅರಬ್ ಸಂಸ್ಕೃತಿ ಪ್ರಚಾರ ಮಾಡುವ ಹಿಜಾಬ್ ಧರಿಸಿ ಬೇರೆಯವರ ಮೇಲೆ ಪ್ರಭಾವ ಬೀರುವುದು ಯಾಕೆ? ಹಿಂದೂ ದೇವಸ್ಥಾನಗಳಿಗೆ ಭೇಟಿ ನೀಡುವಾಗ ಈ ರೀತಿ ಸಂಸ್ಕೃತಿ ಪ್ರತಿಬಿಂಬಿಸುವ ಉಡುಗೆ ತೊಡುವುದಿಲ್ಲ ಯಾಕೆ? ಎಂದಿದ್ದಾರೆ.

ಕೆಲವರು ದೀಪಿಕಾ ಹಿಂದೂ ಸಂಪ್ರದಾಯಗಳನ್ನು ಈ ರೀತಿ ಪ್ರಚಾರ ಮಾಡುವುದಿಲ್ಲವಲ್ಲ ಎಂದು ಟೀಕಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read