ಕಾರವಾರ: ಸ್ನೇಹಿತನ ಹುಟ್ಟುಹಬ್ಬಕ್ಕೆಂದು ಹೋಗಿದ್ದ ಯುವಕ ಹೊಳೆ ನೀರಿಗೆ ಬಿದ್ದು ತೇಲಿ ಹೋಗಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ನ ಕೆಳಾಸೆಯಲ್ಲಿ ನಡೆದಿದೆ.
ಸಬಗೇರಿ ನಿವಾಸಿ ಸಾಗರ್ ಮೃತ ಯುವಕ. ಸಾಗರ್ ತನ್ನ ಮೂರ್ನಾಲ್ಕು ಸ್ನೇಹಿತರೊಂದಿಗೆ ಸೇರಿ ಸ್ನೇಹಿತನ ಹುಟ್ಟುಹಬ್ಬ ಆಚರಣೆಗೆಂದು ಕೆಳಾಸೆ ಬಳಿಯ ಹೊಳೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದು, ನೀರಿನ ರಭಸಕ್ಕೆ ಸಾಗರ್ ಕೊಚ್ಚಿ ಹೋಗಿದ್ದಾನೆ.
ಘಟನಾ ಸ್ಥಳಕ್ಕೆ ಆಗಮಿಸಿರುವ ಯಲ್ಲಾಪುರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಯುವಕನಿಗಾಗಿ ಶೋಧಕಾರ್ಯ ನಡೆಸಿದ್ದಾರೆ.