BREAKING: ‘ಯಶಸ್ವಿನಿ’ ಯೋಜನೆ ಫಲಾನುಭವಿಗಳಿಗೆ ABArK ಅಡಿಯಲ್ಲಿ ಚಿಕಿತ್ಸೆ ಮುಂದುವರಿಕೆಗೆ ಆದೇಶ

ಬೆಂಗಳೂರು: ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ABArK ಅಡಿಯಲ್ಲಿ ಚಿಕಿತ್ಸೆ ಮುಂದುವರಿಕೆ ಹಾಗೂ SAST ಮೂಲಕ ಸದರಿ ಫಲಾನುಭವಿಗಳ ಮಾಹಿತಿ ಸಲ್ಲಿಕೆ ಕುರಿತ ಸರ್ಕಾರದ ಆದೇಶ ಹೊರಡಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಯಶಸ್ವಿನಿ ಯೋಜನೆಯಡಿಯಲ್ಲಿ ಫಲಾನುಭವಿಗಳಾಗಿರುವ ABArK ಯೋಜನೆಯ ಫಲಾನುಭವಿಗಳಿಗೆ ಯಶಸ್ವಿನಿ ಯೋಜನೆಯಲ್ಲೇ ಪ್ರಯೋಜನವನ್ನು ಪಡೆಯಲು ಸೂಕ್ತ ಹಿಂಬರಹವನ್ನು ನೀಡಬಹುದೆಂದು ಈ ಮೂಲಕ ಆದೇಶಿಸಲಾಗಿದೆ. ಆಸ್ಪತ್ರೆಗಳಲ್ಲಿನ ಚಿಕಿತ್ಸೆಯ ಈ ಹಿಂಬರಹವನ್ನು ಖಾಸಗಿ SAST ರೆಫರಲ್ (referral) ನೀಡುವ ಹಂತದಲ್ಲಿ ನೀಡಬಹುದಾಗಿದೆ.

ಆದಾಗ್ಯೂ, ಸರ್ಕಾರಿ ಆಸ್ಪತ್ರೆಗಳು ವ್ಯಾಪಕವಾಗಿ ಲಭ್ಯವಿರುವುದರಿಂದ ಇವುಗಳ ಬಳಕೆಯ ಅವಕಾಶದಿಂದ ಯಶಸ್ವಿನಿ ಯೋಜನೆಯ ಫಲಾನುಭವಿಗಳು ವಂಚಿತವಾಗಬಾರದೆಂದು ಮನಗಂಡು, ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ABARK ಅಡಿಯಲ್ಲಿ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಮುಂದುವರೆಯುತ್ತದೆ. ಆದರೆ, SAST ಅಂತಹ ಎಲ್ಲಾ ಫಲಾನುಭವಿಗಳ ಮಾಹಿತಿಯನ್ನು ಸಹಕಾರ ಇಲಾಖೆಯೊಂದಿಗೆ ಹಂಚಿಕೊಳ್ಳುವುದು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ABArK ದರದಲ್ಲಿ ಚಿಕಿತ್ಸಾ ವೆಚ್ಚವನ್ನು ಮರುಪಾವತಿಸಲು ಕ್ಷೇಮ್ ಅನ್ನು ಸಲ್ಲಿಸುವುದು.

ಇದಲ್ಲದೆ, SAST ಕಳೆದ ವರ್ಷದಲ್ಲಿ 3.07 ಲಕ್ಷ ಯಶಸ್ವಿನಿ ಫಲಾನುಭವಿಗಳಿಗೆ ABArK ಅಡಿಯಲ್ಲಿ ಪಾವತಿಸಲಾದ ರೂ.130.22 ಕೋಟಿ ಮೊತ್ತವನ್ನು ಸಹಕಾರ ಇಲಾಖೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮರುಪಾವತಿಸಿಕೊಳ್ಳಲು ಮಾಹಿತಿಯನ್ನು ಸಹಕಾರ ಇಲಾಖೆಯೊಂದಿಗೆ ಹಂಚಿಕೊಳ್ಳುವುದು.

ಈ ವ್ಯವಸ್ಥೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾರ್ಯಗತಗೊಳಿಸಲು SAST ಗೆ ಸೂಚಿಸಲಾಗಿದ್ದು, ಹಾಗೂ ಈ ಆದೇಶವನ್ನು ಅನುಷ್ಠಾನಗೊಳಿಸಲು ಏನಾದರು ಸಾಧಕ-ಬಾಧಕಗಳಿದ್ದಲ್ಲಿ ತಕ್ಷಣವೇ ಸರ್ಕಾರದ ಗಮನಕ್ಕೆ ತರುವಂತೆ ಸೂಚಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read