ಆಂಧ್ರಪ್ರದೇಶ : ಕೊನಸೀಮಾ ಜಿಲ್ಲೆಯ ಮಂಡಪೇಟ್ ಕ್ಷೇತ್ರದ ರಾಯವರಂ ಮಂಡಲದ ವೆದುರುಪಕ ಸವರಂ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಅವಘಡದಲ್ಲಿ ಆರು ಜನರು ಸಾವನ್ನಪ್ಪಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಗಳು ನಡೆಯುತ್ತಿವೆ. ಅವಘಡಕ್ಕೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ.
ಕುಮ್ಮರಿಪಲೆಂ ಗ್ರಾಮದ ನಿವಾಸಿ ಎಲುಗುಬಂಟ್ಲ ಈ ಪಟಾಕಿ ತಯಾರಿಕಾ ಕೇಂದ್ರವನ್ನು ನಡೆಸುತ್ತಿದ್ದಾರೆ. ಅವರು ಕಳೆದ 40 ವರ್ಷಗಳಿಂದ ಇದೇ ವ್ಯವಹಾರದಲ್ಲಿದ್ದಾರೆ. ಸತ್ತಿಬಾಬು ಇಂಡಸ್ಟ್ರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಪ್ರಸಿದ್ಧ ಪಟಾಕಿ ಕೇಂದ್ರಗಳಲ್ಲಿ ಒಂದಾಗಿದೆ.
కోనసీమ జిల్లా రాయవరంలో భారీ అగ్ని ప్రమాదం, 6మంది మృతి
— NageshT (@NageshT93116498) October 8, 2025
బాణాసంచా తయారీ కేంద్రంలో ఎగసిపడిన మంటలు, మంట లార్పుతున్న అగ్నిమాపక సిబ్బంది. pic.twitter.com/dCSGb6lKfu