ಕೋಲಾರ: ಮದುವೆ ಮುಗಿಸಿ ಬರುತ್ತಿದ್ದ ಬಸ್ ರಸ್ತೆ ಬದಿಯ ಕಾಲುವೆಗೆ ಪಲ್ಟಿಯಾಗಿದೆ. ಬಸ್ ನಲ್ಲಿದ್ದ ಸುಮಾರು ಮೂವತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಕೋಲಾರ ತಾಲೂಕಿನ ಸುಗಟೂರು ಬಳಿ ಅಪಘಾತ ಸಂಭವಿಸಿದೆ. ಕೋಲಾರದಿಂದ ದಿಬ್ಬೂರಹಳ್ಳಿಗೆ ಹೋಗುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಬಸ್ ನಲ್ಲಿದ್ದ ದಿಬ್ಬೂರಹಳ್ಳಿಯ 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.