ಕೊಪ್ಪಳ: ಶೀಗೆಹುಣ್ಣಿಮೆ ಹಿನ್ನೆಲೆಯಲ್ಲಿ ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಹರಿದು ಬಂದಿದ್ದು, ಕಾಲ್ತುಳಿತದ ಸ್ಥಿತಿ ಉಂಟಾಗಿದೆ.
ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಜನಸಾಗರದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಶೀಗೆಹುಣ್ಣಿಮೆ ನಿಮಿತ್ತ ಹುಲಿಗೆಮ್ಮ ದೇವಸ್ಥಾನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತಸಾಗರವೇ ಹರಿದು ಬಂದಿದೆ. ದೇವಸ್ಥಾನದ ಬಳಿ ನೂಕು ನುಗ್ಗಲು ಉಂಟಾಗಿದ್ದು, ಕೆಲ ಕಾಲ ಕಾಲ್ತುಳಿತದ ಸ್ಥಿತಿ ನಿರ್ಮಾಣವಾಗಿ ಆತಂಕದ ವಾತಾವರಣ ಸೃಷ್ಟಿಯಾಯಿತು.
ಜನಜಂಗುಳಿ ನಡುವೆ ಸಿಲುಕಿದ ವೃದ್ಧರು, ಮಕ್ಕಳು, ಮಹಿಳೆಯರು ಕೆಳಗೆ ಬಿದ್ದಿದ್ದು, ನೂಕಾಟ, ತಳ್ಳಾಟ ನಡೆದಿದ್ದು, ಭಕ್ತರು ನರಳಾಡಿದ ಘಟನೆಯೂ ನಡೆಯುತು. ದೇವಾಯದ ಬಳಿ ಕಿಕ್ಕಿರಿದು ಜನರು ಸೇರಿದ್ದು, ದೇವರ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಮತ್ತೊಂದೆಡೆ ಟ್ರಾಫಿಕ್ ನಿಯಂತ್ರಿಸಲು ಸ್ವತಃ ಕೊಪ್ಪಳ ಎಸ್ ಪಿ ಫೀಲ್ಡಿಗಿಳಿದಿದ್ದಾರೆ.