ಮಂಗಳೂರು: ಅಕ್ರಮವಾಗಿ ಜಾಅನುವಾರುಗಖನ್ನು ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣ ಸಂಬಂಧ ಪೊಲೀಸರು ಧಿಧೀರ್ ದಾಳಿ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ತಾಲೂಕಿನ ಗಂಟಾಲ್ ಕಟ್ಟೆಯಲ್ಲಿ ನಡೆದಿದೆ.
ಜಲೀಲ್ ಎಂಬಾತನ ಮನೆಯ ಹಿಂಭಾಗದ ಕಾಡಿನಲ್ಲಿ ಜಾನುವಾರುಗಳನ್ನು ಕಡಿದು ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಆಧರಿಸಿ ಮೂಡಬಿದರೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಮಾಂಸ ಸಹಿತ ಕೆಲ ಉಪಕರಣಗಳನ್ನು, ಮೂರು ದನಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಆರೋಪಿ ಜಲೀಲ್, ಸಾಹಿಲ್ ಹಾಗೂ ಆತನ ಪುತ್ರ ಸೊಹೇಲ್, ಮೊಹಮ್ಮದ್ ಅಶ್ರಫ್ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.