ತುಮಕೂರು: ಕುವೈತ್ ನಿಂದ ವಾಪಸ್ ಆಗಿರುವ ಪತಿ ಮಹಾಶಯನೊಬ್ಬ ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿ ಫೇಸ್ ಬುಕ್ ಲೈವ್ ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪತಿ ಸೋಪ್ ನೀರು ಕುಡಿದು ಡ್ರಾಮಾ ಮಾಡ್ತಿದ್ದಾನೆ ಎಂದು ಪತ್ನಿ ತಿಳಿಸಿದ್ದಾರೆ.
ತುಮಕೂರಿನ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಕುವೈತ್ ನಿಂದ ವಾಪಸ್ ಆಗಿರುವ ಸಲ್ಮಾನ್ ಪಾಷಾ, ತನ್ನ ಪತ್ನಿ ತನಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಫೇಸ್ ಬುಕ್ ಲೈವ್ ಗೆ ಬಂದು ಆತ್ಮಹತ್ಯೆ ಯತ್ನ ನಡೆಸಿದ್ದ. ಇದಾದ ಕೆಲವೇ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಲ್ಮಾನ್ ಪಾಷಾ ಪತ್ನಿ ನಿಖಾತ್, ಪತಿ ನನ್ನ ಮೇಲೆ ಆಸಿಡ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದ. ಇದರಿಂದ ನೊಂದು ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಈಗ ಪತಿ ಫೇಸ್ ಬುಕ್ ಲೈವ್ ಗೆ ಬಂದು ಸೋಪ್ ನೀರು ಕುಡಿದು ಡ್ರಾಮಾ ಮಾಡ್ತಿದ್ದಾನೆ. ಆತ್ಮಹತ್ಯೆ ಯತ್ನ ಎಂದು ನಾಟಕವಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ನಾನು ಕೆಲಸ ಮಾಡುವ ಜಾಗಕ್ಕೂ ಬಂದು ಅಲ್ಲಿಯೂ ನನ್ನ ಮೇಲೆ ಆಸಿಡ್ ಹಾಕುವುದಾಗಿ ಬೆದರಿಸಿದ್ದಾನೆ. ಇದರಿಂದ ನಾನು ಕೆಲದಿನಗಳ ಹಿಂದೆ ಪತಿ ವಿರುದ್ಧ ದೂರು ನೀಡಿದ್ದೆ. ಆತನೇ ನನಗೆ ಕಿರುಕುಳ ನೀಡುತ್ತಿದ್ದಾನೆ ಹೊರತು ನಾನು ಯಾವುದೇ ಕಿರುಕುಳ ನೀಡಿಲ್ಲ. ಪತಿ ನನ್ನ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.