ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಣಜನಹಳ್ಳಿಯಲ್ಲಿ ಶೀಲಶಂಕಿಸಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ.
ಸುನಿತಾ(25) ಕೊಲೆಯಾದ ಮಹಿಳೆ. ಪತಿ ಲಿಂಗರಾಜ್ ಉಸಿರುಗಟ್ಟಿಸಿ ಪತ್ನಿ ಸುನಿತಾ ಅವರನ್ನು ಕೊಲೆ ಮಾಡಿದ್ದಾನೆ. ನಂತರ ಜಮೀನಿನಲ್ಲಿ ಶವವನ್ನು ಸುಟ್ಟು ಹಾಕಿದ್ದಾನೆ. ಬೆಂಕಿ ಹಚ್ಚುವ ವೇಳೆ ಆರೋಪಿ ಲಿಂಗರಾಜನಿಗೂ ಸುಟ್ಟ ಗಾಯಗಳಾಗಿವೆ.
ಶವಕ್ಕೆ ಬೆಂಕಿ ಹಚ್ಚುವಾಗ ಲಿಂಗರಾಜ ಗಾಯಗೊಂಡಿದ್ದು, ಆತನನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.