ಅಮೆರಿಕ : ಮಂಗಳವಾರ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ನಗರದ ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ದೃಢೀಕರಿಸದ ವರದಿಗಳು ಸೂಚಿಸಿವೆ. ಮಕ್ಕಳ ಆಸ್ಪತ್ರೆಯಿಂದ ಹೆಲಿಕಾಪ್ಟರ್ ಹಾರಿದೆ ಎಂದು ತಿಳಿದುಬಂದಿದೆ.
ಘಟನೆಯ ವೀಡಿಯೊದಲ್ಲಿ ಹೆದ್ದಾರಿಯ ಸಮೀಪದಲ್ಲಿ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ತಿರುಗುತ್ತಿರುವುದನ್ನು ತೋರಿಸಲಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದ ಘಟನೆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
WATCH: Medical helicopter crashes onto highway in Sacramento, California; several injuries pic.twitter.com/LoTWPiO328
— BNO News (@BNONews) October 7, 2025