ನಟ ವಿಜಯ್ ದೇವರಕೊಂಡ ಕಾರು ಅಪಘಾತವಾಗಿದ್ದು, ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.ಅಭಿಮಾನಿಗಳಿಗೆ ತಾವು ಸುರಕ್ಷಿತವಾಗಿರುವುದಾಗಿ ಭರವಸೆ ನೀಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಲೈಗರ್ ಸ್ಟಾರ್ ಹೀಗೆ ಬರೆದಿದ್ದಾರೆ, “ಎಲ್ಲವೂ ಚೆನ್ನಾಗಿದೆ! ಕಾರು ಅಪಘಾತಕ್ಕೀಡಾಯಿತು, ಆದರೆ ನಾವೆಲ್ಲರೂ ಚೆನ್ನಾಗಿದ್ದೇವೆ.. ದೊಡ್ಡ ಅಪ್ಪುಗೆಗಳು ಮತ್ತು ನಿಮ್ಮೆಲ್ಲರಿಗೂ ನನ್ನ ಪ್ರೀತಿ. ಈ ಸುದ್ದಿ ನಿಮ್ಮನ್ನು ಒತ್ತಡಕ್ಕೆ ಒಳಪಡಿಸಲು ಬಿಡಬೇಡಿ ಎಂದಿದ್ದಾರೆ. ಹಿಂದಿನ ದಿನ ಅಪಘಾತದ ಬಗ್ಗೆ ತಿಳಿದ ನಂತರ ಕಳವಳ ವ್ಯಕ್ತಪಡಿಸಿದ್ದ ಅವರ ಅಭಿಮಾನಿಗಳಿಗೆ ನಟನ ಸಂದೇಶವು ಸಮಾಧಾನ ತಂದಿದೆ.
ತೆಲುಗು ನಟ ವಿಜಯ್ ದೇವರಕೊಂಡ ಕಾರ್ ಅಪಘಾತಕ್ಕೀಡಾಗಿದೆ. ಪುಟ್ಟಪರ್ತಿಗೆ ಹೋಗಿ ಬರುವಾಗ ಕಾರ್ ಅಪಘಾತಕ್ಕೀಡಾಗಿದೆ. ತೆಲಂಗಾಣದ ಗದ್ವಾಲ್ ಜಿಲ್ಲೆಯ ಉಂಡವಳ್ಳಿ ಸಮೀಪ ಅಪಘಾತ ಸಂಭವಿಸಿದೆ.
ವಿಜಯ್ ದೇವರಕೊಂಡ ಅವರ ಕಾರ್ ಸೋಮವಾರ ಸಂಜೆ ಜೋಗುಳಂಬ ಗಡ್ವಾಲ್ ಜಿಲ್ಲೆಯ ಉಂಡವಳ್ಳಿಯಲ್ಲಿ ಅಪಘಾತಕ್ಕೀಡಾಗಿದ್ದು, ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ನಟ ಪುಟ್ಟಪರ್ತಿಯಿಂದ ಹೈದರಾಬಾದ್ಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 44 ರ ವರಸಿದ್ಧಿ ವಿನಾಯಕ ಕಾಟನ್ ಮಿಲ್ ಬಳಿ ನಂದಿಕೂರಿನಿಂದ ಪೆಬ್ಬೈರ್ಗೆ ಕುರಿಗಳನ್ನು ಸಾಗಿಸುತ್ತಿದ್ದ ಟ್ರಕ್ ಹಠಾತ್ ಬ್ರೇಕ್ ಹಾಕಿದ್ದರಿಂದ ಈ ಅಪಘಾತ ಸಂಭವಿಸಿದೆ. ಪರಿಣಾಮವಾಗಿ, ವಿಜಯ್ ಕಾರ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೊಲೆರೊ ಪಿಕಪ್ ಟ್ರಕ್ಗೆ ಡಿಕ್ಕಿ ಹೊಡೆದು, ಅವರ ವಾಹನಕ್ಕೆ ಭಾಗಶಃ ಹಾನಿಯಾಗಿದೆ.ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಪಘಾತದ ನಂತರ, ವಿಜಯ್ ದೇವರಕೊಂಡ ತನ್ನ ಸ್ನೇಹಿತನ ಕಾರ್ ನಲ್ಲಿ ಹೈದರಾಬಾದ್ಗೆ ಪ್ರಯಾಣ ಮುಂದುವರಿಸಿದರು.