ಲಿಂಗತ್ವ ಅಲ್ಪಸಂಖ್ಯಾತರರ ಮೂಲ ಹಂತದ ಸಮೀಕ್ಷೆಯ ಸ್ಥಳ ಬದಲಾವಣೆ

ಧಾರವಾಡ : ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರರ ಮೂಲ ಹಂತದ ಸಮೀಕ್ಷೆಯನ್ನು ಸಪ್ಟೆಂಬರ 15, 2025 ರಿಂದ ಪ್ರಾರಂಭವಾಗಿ ನವೆಂಬರ 21, 2025 ರವರೆಗೂ ನಡೆಯುತ್ತಿದೆ. ಸರ್ಕಾರಿ ಜಿಲ್ಲಾ ಮತ್ತು ತಾಲ್ಲೂಕಿನ ಆಸ್ಪತ್ರೆಗಳಲ್ಲಿ ನಡೆಸುತ್ತಿದ್ದ ಸಮೀಕ್ಷೆಯನ್ನು ಸಪ್ಟೆಂಬರ 21, 2025 ರಂದು ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಕಾರ್ಯದರ್ಶಿಗಳು ನೀಡಿದ ನಿರ್ದೇಶದನ್ವಯ ಸಮೀಕ್ಷೆಯನ್ನು ಸ್ಥಳ ಬದಲಾವಣೆ ಮಾಡಲಾಗಿದೆ.

ಸರ್ಕಾರದ ಕಾರ್ಯದರ್ಶಿ ಅವರ ನಿರ್ದೇಶನದಂತೆ ಸ್ಥಳ ಬದಲಾವಣೆ ಮಾಡಿ ಉಪ ನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಲಭವನ ಧಾರವಾಡ ಮತ್ತು ತಾಲೂಕು ಸಿಡಿಪಿಓ ಕಛೇರಿಗಳಲ್ಲಿ ಹಾಗೂ ಇನ್ನೀತರ ಸರ್ಕಾರಿ ಕಛೇರಿಗಳಲ್ಲಿ ಸಮೀಕ್ಷೆಯ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read