ರಾಯಚೂರು: ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಪೋತ್ನಾಳ ಬಳಿ ನಡೆದಿದೆ.
ಮರಿಯಮ್ಮ(32) ಮತ್ತು ಅವರ ಸಹೋದರ ಶೇಖರ(24) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮರಿಯಮ್ಮ ಅವರ ಮಗಳಾದ ಒಂದು ವರ್ಷದ ಗೌತಮಿ ಗಾಯಗೊಂಡಿದ್ದಾಳೆ. ಅಕ್ಕ ಮರಿಯಮ್ಮ ಮತ್ತು ಆಕೆಯ ಮಗಳನ್ನು ಬೈಕ್ ನಲ್ಲಿ ಶೇಖರ್ ಕರೆದೊಯ್ಯುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸಿಂಧನೂರು ತಾಲೂಕಿನ ವಲ್ಕಂದಿನ್ನಿ ಗ್ರಾಮದಿಂದ ಮಾನ್ವಿ ತಾಲೂಕಿನ ಕರೆಗುಡ್ಡ ಗ್ರಾಮಕ್ಕೆ ಬೈಕ್ ನಲ್ಲಿ ತೆರಳುವಾಗ ಕಾರ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.