ರಾಯಚೂರು: ನಾಲೆಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ನಡೆದಿದೆ.
ಇಲ್ಲಿನ ಸಿರಿವಾರ ಬಳಿ ಈ ಘಟನೆ ನಡೆದಿದೆ. ವೆಂಕಟೇಶ್ (28) ಹಾಗೂ ಯಲ್ಲಾಲಿಂಗ (28) ಮೃತ ದುರ್ದೈವಿಗಳು. ಯಲ್ಲಾಲಿಂಗನ ರಕ್ಷಣೆಗೆ ಹೋಗಿ ವೆಂಕಟೇಶ್ ಕೂಡ ಪ್ರಾಣ ಕಳೆದುಕೊಂಡಿದ್ದಾನೆ.
ಕಾಂತಾರಾ ಸಿನಿಮಾ ನೋಡಲೆಂದು ಮುದಗಲ್ ನಿಂದ ಮಸ್ಕಿಗೆ ತೆರಳಿದ್ದರು. ಆದರೆ ಮಧ್ಯಾಹ್ನದ ಶೋಗೆ ಟಿಕೆಟ್ ಸಿಕ್ಕಿರಲಿಲ್ಲ. ಸಂಜೆಯ ಶೋಗೆ ಟಿಕೆಟ್ ಸಿಕ್ಕಿತ್ತು. ಅಲ್ಲಿಯವರೆಗೆ ನಾಲೆಯ ನೀರಿನಲ್ಲಿ ಈಜಲೆಂದು ಹೋಗಿದ್ದಾರೆ. ಈ ವೇಳೆ ದುರಂತ ಸಂಭವಿಸಿದೆ. ನಾಲೆಯ ನೀರಿನ ಸೆಳೆತಕೆ ಇಬ್ಬರೂ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.