ಮುಂಬೈ: ಅಮೃತಸರದಿಂದ ಬರ್ಮಿಂಗ್ ಹ್ಯಾಮ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ರ್ಯಾಮ್ ಏರ್ ಟರ್ಬೈನ್ (ಆರ್ ಎಟಿ) ಸಾಧನ ನಿಷ್ಕ್ರಿಯಗೊಂಡು, ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.
ವಿಮಾನದ ರ್ಯಾಮ್ ಏರ್ ಟರ್ಬೈನ್ ಸಾಧನ ನಿಷ್ಕ್ರಯಗೊಂಡಿರುವುದನ್ನು ವಿಮಾನ ಸಿಬ್ಬಂದಿಗಳು ಗಮನಿಸಿದ್ದು, ತಕ್ಷಣ ಭೂಸ್ಪರ್ಶ ಮಾಡಲಾಗಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ.
ಪ್ರಯಾಣಿಕರಿಗಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.