ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಮಿರಿಕ್ ನಲ್ಲಿ ಸೇತುವೆ ಕುಸಿದು ಕನಿಷ್ಠ ಆರು ಜನ ಸಾವನ್ನಪ್ಪಿದ್ದಾರೆ. ಭಾರಿ ಮಳೆಯಿಂದಾಗಿ ಸೇತುವೆ, ಭೂಕುಸಿತವಾಗಿದ್ದು, ಮಗು ಸೇರಿ 6 ಜನ ಮೃತಪಟ್ಟಿದ್ದಾರೆ. ಭಾರೀ ಮಳೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಲ್ಲಾ ಪಟ್ಟಣಗಳು ಮತ್ತು ಪ್ರವಾಸಿ ತಾಣಗಳಾದ ಮಿರಿಕ್ ಮತ್ತು ಕುರ್ಸಿಯೊಂಗ್ ಅನ್ನು ಸಂಪರ್ಕಿಸುವ ದುಡಿಯಾ ಐರನ್ ಸೇತುವೆಯೂ ಕುಸಿದಿದೆ.
ಕುರ್ಸಿಯೊಂಗ್ ಬಳಿಯ ರಾಷ್ಟ್ರೀಯ ಹೆದ್ದಾರಿ 110 ರ ಉದ್ದಕ್ಕೂ ಇರುವ ಹುಸೇನ್ ಖೋಲಾದಲ್ಲಿ ಭಾರೀ ಮಳೆಯಿಂದ ಭೂಕುಸಿತವಾಗಿದ್ದು, ಸಿಲಿಗುರಿ ಮತ್ತು ಡಾರ್ಜಿಲಿಂಗ್ ನಡುವಿನ ಸಂಪರ್ಕವನ್ನು ಕಡಿತಗೊಳಿಸಿದೆ.
ಉತ್ತರ ಬಂಗಾಳದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ, ಡಾರ್ಜಿಲಿಂಗ್, ಕಾಲಿಂಪಾಂಗ್ ಮತ್ತು ಕುರ್ಸಿಯೊಂಗ್‌ನ ಗುಡ್ಡಗಾಡು ಪ್ರದೇಶಗಳು ತೀವ್ರವಾಗಿ ಬಾಧಿತವಾಗಿವೆ, ಭೂಕುಸಿತ ಮತ್ತು ಪ್ರವಾಹದಿಂದಾಗಿ ಸಿಲಿಗುರಿ, ಟೆರೈ ಮತ್ತು ಡೂರ್ಸ್ ಬಯಲು ಪ್ರದೇಶಗಳಿಗೆ ಸಂವಹನ ಮತ್ತು ಸಾರಿಗೆ ಸಂಪರ್ಕಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ.
