ಬೆಂಗಳೂರು: ಮಾಜಿ ಸಂಸದೆ, ನಟಿ ರಮ್ಯಾ ಅವರಿಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ನಟ ದರ್ಶನ್ ಫ್ಯಾನ್ಸ್ ವಿರುದ್ಧದ ತನಿಖೆಯನ್ನು ಸೈಬರ್ ಕ್ರೈಂ ಪೊಲೀಸರು ಮುಂದುವರೆಸಿದ್ದಾರೆ. 12 ಆರೋಪಿಗಳ ಮೊಬೈಲ್ ಗಳನ್ನು ಎಫ್ ಎಸ್ ಎಲ್ ಗೆ ರವಾನಿಸಲಾಗಿದೆ.
ರಮ್ಯಾ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ 12 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಮೊಬೈಲ್ ರಿಟ್ರೀವ್ ಗಾಗಿ ಎಫ್ ಎಸ್ ಎಲ್ ಗೆ ರವಾನಿಸಲಾಗಿದೆ. ಎಫ್ ಎಸ್ ಎಲ್ ವರದಿ ಬಂದ ಬಳಿಕ ಪ್ರಕರಣದ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ.
ಇನ್ನೊಂದೆಡೆ ಪರಪ್ಪನ ಅಗ್ರಹಾರ ಸೇರಿರುವ 12 ಕಿಡಿಗೇಡಿಗಳು ಜಾಮೀನು ಸಿಗದೇ ಜೈಲಿನಲ್ಲಿ ಪರದಾಡುವಂತಾಗಿದೆ.