ಉಡುಪಿ: ಪ್ರಿಯಕರನ ಭೇಟಿಗೆ ತೆರಳುತ್ತಿದ್ದ ಪುತ್ರಿಯ ನಡೆಗೆ ಸಿಟ್ಟಾದ ತಾಯಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನದ ಕಾನಂಗಿಯಲ್ಲಿ ನಡೆದಿದೆ.
ಶಿಫಾನಾಜ್ ಕೊಲೆಯಾದ ಯುವತಿ. ಆಕೆಯ ತಾಯಿ ಗುಲ್ಜಾರ್ ಬಾನು(45) ಅವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ವಹಿಸಿದೆ. ಸೆಪ್ಟೆಂಬರ್ 20ರಂದು ಪ್ರಿಯಕರನ ಭೇಟಿಗೆ ತೆರಳುತ್ತಿದ್ದ ಪುತ್ರಿಯ ಮೇಲೆ ಸಿಟ್ಟಾದ ಗುಲ್ಜಾರ್ ಬಾನು ಮರ್ಯಾದೆ ತೆಗೆಯುತ್ತಿಯಾ ಎಂದು ಕುತ್ತಿಗೆ ಒತ್ತಿ ಹಿಡಿದು ಕೊಲೆ ಮಾಡಿದ್ದಾಳೆ. ನಂತರ ಶಿಫಾನಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾಳೆ.
ಶಿಫಾನಾಜ್ ತಂದೆ ಶೇಖ್ ಮುಸ್ತಾಫಾ ಕಾರ್ಕಳ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.