ನವದೆಹಲಿ: ಕೇಂದ್ರ ಸರ್ಕಾರವು ಫಾಸ್ಟ್ಯಾಗ್ ಇಲ್ಲದವರಿಗೆ ಶುಭ ಸುದ್ದಿ ನೀಡಿದೆ. ನವೆಂಬರ್ 15ರಿಂದ ಫಾಸ್ಟ್ಯಾಗ್ ಇಲ್ಲದ ವಾಹನಗಳ ಮಾಲೀಕರು ದುಪ್ಪಟ್ಟು ಹಣ ಪಾವತಿಸಬೇಕಿಲ್ಲ.
ಆದರೆ ಯುಪಿಐ ಪಾವತಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ನಗದು ರೂಪದಲ್ಲಿ ಟೋಲ್ ಶುಲ್ಕ ಪಾವತಿಸುವವರು ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಶುಲ್ಕ ದರಗಳು ಮತ್ತು ಸಂಗ್ರಹ ನಿರ್ಣಯ ನಿಯಮಗಳು 2008 ತಿದ್ದುಪಡಿ ಮಾಡಿದ್ದು, ಫಾಸ್ಟ್ಯಾಗ್ ಇಲ್ಲದ ಬಳಕೆದಾರರಿಗೆ ಅವರ ಪಾವತಿ ವಿಧಾನ ಆಧರಿಸಿ ವಿಭಿನ್ನ ಶುಲ್ಕ ಪರಿಚಯಿಸಲಾಗಿದೆ. ಡಿಜಿಟಲ್ ವಹಿವಾಟು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ.