ಬೆಂಗಳೂರು: ಡಿಎಆರ್ ಡಿವೈ ಎಸ್ ಪಿ ನಂಜುಂಡಯ್ಯ ವಿರುದ್ಧ ಕೋಟಿ ಕೋಟಿ ವಂಚನೆ ಆರೋಪ ಕೇಳಿಬಂದಿದೆ. ಸಂಬಂಧಿಕರ ಜಮೀನು ಅಭಿವೃದ್ಧಿ ಮಾಡುವುದಾಗಿ ಹಣ ಪಡೆದು ಫೋರ್ಜರಿ ಮಾಡಿ ಹಲವರ ಹೆಸರಿಗೆ ಒಂದೇ ಸೈಟ್ ನ್ನು ಅಗ್ರಿಮೆಂಟ್ ಮಾಡಿಕೊಂಟ್ಟಿರುವ ಆರೋಪ ಕೇಳಿಬಂದಿದೆ.
ಒಂದೇ ಸೈಟ್ ನ್ನು ಹಲವರಿಗೆ ನಕಲಿ ಸಹಿ ಹಾಕಿ ಅಗ್ರಿಮೆಂಟ್ ಮಾಡಿಕೊಟ್ಟಿದ್ದೂ ಅಲ್ಲದೇ ಕೋಟಿ ಕೋಟಿ ಹಣ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ಸಂಬಂಧಿಕರು ಪ್ರಶ್ನಿಸಿದ್ದಕ್ಕೆ ಧಮ್ಕಿ ಹಾಕಿ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಕಂಗಾಲಾಗಿರುವ ಸಂಬಂಧಿಕರು ನೆಲಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಂಚನೆ ಆರೋಪದಲ್ಲಿ ಡಿಎಆರ್ ಡಿವೈ ಎಸ್ ಪಿ ನಂಜುಂಡಯ್ಯನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.