ಬೆಂಗಳೂರು: ನಮ್ಮ ಮೆಟ್ರೋ ಟ್ರ್ಯಾಕ್ ಗೆ ಜಿಗಿದು ಪ್ರಯಾಣಿಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಮೆಟ್ರೋ ರೈಲಿನ ಅಡಿ ಸಿಲುಕಿ ಪ್ರಯಾಣಿಕ ಪರದಾಡಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ನಡೆದಿದೆ.
ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇಂದು ಮಧ್ಯಾಹ್ನ 3:19ರ ಸುಮಾರಿಗೆ ಪ್ರಯಾಣಿಕನೊಬ್ಬ ಪ್ಲಾಟ್ ಫಾರಂ 3ರಲ್ಲಿ ಏಕಾಏಕಿ ಮೆಟ್ರೋ ರೈಲಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹೀಗೆ ಜಿಗಿದ ವ್ಯಕ್ತಿ ಮೆಟ್ರೋ ರೈಲಿನ ಕೆಳಗೆ ಸಿಲುಕಿಕೊಂಡಿದ್ದಾನೆ. ಸದ್ಯ ಮೆಟ್ರೋ ರೈಲು ಪ್ಲಾಟ್ ಫಾರಂ 3ರಲ್ಲಿ ನಿಂತಿದ್ದು, ಪ್ರಯಾಣಿಕನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಮಾದವಾರ-ರೇಷ್ಮೆ ಸಂಸ್ಥೆ ನಡುವಿನ ಹಸಿರು ಮಾರ್ಗ ಮೆಟ್ರೋ ಹಳಿಯಲ್ಲಿ ಈ ಘಟನೆ ನಡೆದಿದೆ.