ಬೆಂಗಳೂರು : ಬೆಂಗಳೂರಿನ ಹೋಟೆಲ್ ಒಂದರಲ್ಲಿ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದು, ನಿನ್ನೆ ಸಂಜೆ 7 ಗಂಟೆ ವೇಳೆಗೆ ಅಗ್ರಹಾರ ದಾಸರಹಳ್ಳಿಯಲ್ಲಿರುವ ಲಾಡ್ಜ್ ನಲ್ಲಿ ಘಟನೆ ನಡೆದಿದೆ.
38 ವರ್ಷದ ಯಶೋಧ ಎಂಬ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಅನೈತಿಕ ಸಂಬಂಧಕ್ಕೆ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ವಿಶ್ವನಾಥ್ ಎಂಬುವವರ ಜೊತೆ ಯಶೋಧ ಸ್ನೇಹ ಬೆಳೆಸಿದ್ದರು. ವಿಶ್ವನಾಥ್ ‘ಗೆ ಮದುವೆಯಾಗಿ ಹೆಂಡತಿ ಮಕ್ಕಳಿದ್ದರು. ಸ್ನೇಹಿತೆಯನ್ನ ವಿಶ್ವನಾಥ್ ಗೆ ಯಶೋಧ ಪರಿಚಯಿಸಿದ್ದರು. ಯಶೋಧರ ಸ್ನೇಹಿತೆಗೂ ವಿಶ್ವನಾಥ್ ಗೆ ಸಂಬಂಧವಿತ್ತು ಎನ್ನಲಾಗಿದೆ.
ಸಾವಿಗೂ ಮುನ್ನ ಮಹಿಳೆ ಯಶೋಧ ತನ್ನ ಪ್ರಿಯಕರ ವಿಶ್ವನಾಥ್, ಬೇರೊಂದು ಮಹಿಳೆಯೊಂದಿಗೆ ಓಯೋ ಲಾಡ್ಜ್ ರೂಂ ನಲ್ಲಿರುವ ಬಗ್ಗೆ ತಿಳಿದು ರೂಂ ಮೇಲೆ ದಾಳಿ ನಡೆಸಿದ್ದರು. ಗಲಾಟೆ ಮಾಡಿ ವಿಶ್ವನಾಥ್ ನನ್ನು ಪ್ರಶ್ನಿಸಿದ್ದರು. ಆದರೆ ವಿಶ್ವನಾಥ್ ಸರಿಯಾಗಿ ಮಾತನಾಡಿಲ್ಲ. ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ಯಶೋಧಾ ಅವರಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ವಿಶ್ವನಾಥ್ ಎಂಬಾತನ ಜೊತೆ ಅಕ್ರಮ ಸಂಬಂಧಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ.ಕಳೆದ 8 ವರ್ಷಗಳಿಂದ ಯಶೋಧ ಹಾಗೂ ವಿಶ್ವನಾಥ್ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಯಶೋಧಾ, ತನ್ನ ಸ್ನೇಹಿತೆಗೆ ವಿಶ್ವನಾಥ್ ನನ್ನು ಪರಿಚಯಿಸಿದ್ದರು. ನಂತರ ವಿಶ್ವನಾಥ್, ಯಶೋಧಾ ಸ್ನೇಹಿತೆಯ ಜೊತೆಯೇ ಸುತ್ತಾಡಲು ಆರಂಭಿಸಿದ್ದನು,
ಇಬ್ಬರು ಆ ಲಾಡ್ಜ್ ಗೆ ಹೋಗಿರುವ ಶಂಕೆಯಿದ್ದು, ಅಲ್ಲಿ ಬಂದು ಯಶೋಧ ಗಲಾಟೆ ಮಾಡಿರುವ ಶಂಕೆಯಿದೆ. ಅದೇನೆ ಇರಲಿ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.