ಬೆಳಗಾವಿ: ಬೆಳಗಾವಿಯ ಮಾಬುಸುಬಾನಿ ದರ್ಗಾದ ಉರುಸ್ ವೇಳೆ ‘ಐ ಲವ್ ಮಹಮ್ಮದ್’ ಘೋಷಣೆ ಕೂಗಲಾಗಿದ್ದು, ಈ ಬಗ್ಗೆ ಪ್ರಶ್ನಿಸಿದ ಹಿಂದೂಗಳ ಮೇಲೆ ಅನ್ಯಕೋಮಿನ ಯುವಕರ ಗುಂಪು ಕಲ್ಲು ತೂರಾಟ ನಡೆಸಿದ ಘಟನೆ ಶುಕ್ರವಾರ ರಾತ್ರಿ ಬೆಳಗಾವಿಯ ಖಡಕ್ ಗಲ್ಲಿಯಲ್ಲಿ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬೆಳಗಾವಿ ಪ್ರವಾಸ ಕೈಗೊಂಡಿದ್ದಾರೆ. ಹಿಂದಿನ ದಿನವೇ ಅಹಿತಕರ ಘಟನೆ ನಡೆದಿದೆ. ಶುಕ್ರವಾರ ಬೆಳಗಾವಿಯಲ್ಲಿ ಮಾಬುಸುಬಾನಿ ದರ್ಗಾದ ಉರುಸ್ ಮೆರವಣಿಗೆ ನಡೆಸಲಾಗಿದೆ. ಮೆರವಣಿಗೆ ಸಾಗುತ್ತಿದ್ದ ವೇಳೆ ಖಡಕ್ ಗಲ್ಲಿಗೆ ಪ್ರವೇಶಿಸಿದೆ. ಈ ವೇಳೆ ‘ಐ ಲವ್ ಮಹಮ್ಮದ್’ ಘೋಷಣೆ ಕೂಗಲಾಗಿದೆ.
ಯಾವಾಗಲೂ ಈ ಮಾರ್ಗದಲ್ಲಿ ಬಾರದ ಮೆರವಣಿಗೆ ಈಗ ಬಂದಿದ್ದು. ಘೋಷಣೆ ಕೂಗಲಾಗಿದೆ ಎಂದು ಹಿಂದೂಗಳು ಪ್ರಶ್ನಿಸಿದಾಗ ಯುವಕರು ಕಲ್ಲುತೂರಾಟ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.