ಬೆಂಗಳೂರು: ರೈತರ ಪಾಲಿಗೆ ರಾಜ್ಯ ಸರ್ಕಾರ ಸತ್ತು ಹೋಗಿದೆ ಎಂದು ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಆರ್ ಎಸ್ ಎಸ್ ಬರೆದುಕೊಡುವುದನ್ನು ಹೇಳುವ ಆರ್.ಅಶೋಕ್ ಗೆ ಏನು ಗೊತ್ತು ರೈತರ ಸಮಸ್ಯೆ? ಜನರ ಸಂಕಷ್ಟ? ಎಂದು ಪ್ರಶ್ನಿಸಿದ್ದಾರೆ.
ಪ್ರತಿದಿನ ಆರ್.ಎಸ್.ಎಸ್ ಏನು ಬರೆದುಕೊಡುತ್ತೋ ಅದನ್ನು ಆರ್.ಅಶೋಕ್ ಹೇಳುತ್ತಾರೆ. ಅಶೋಕ್ ಗೆ ರೈತರ ಸಮಸ್ಯೆ, ನಾಡಿನ ಸಮಸ್ಯೆ ಏನು ಗೊತ್ತು? ಆರ್.ಅಶೋಕ್ ರೈತನೇ ಅಲ್ಲ. ಆತ ಬೆಂಗಳೂರಿನವನು. ಸುಮ್ಮನೇ ವಿರೋಧಪಕ್ಷದ ನಾಯಕನನ್ನಾಗಿ ಮಾಡಿದ್ದಕ್ಕೆ ಆಗಿದ್ದಾನೆ ಅಷ್ಟೇ ಎಂದು ಟಾಂಗ್ ನೀಡಿದ್ದಾರೆ.