ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪ್ರಭಾತ್ ನಗರದಲ್ಲಿ ಮನೆ ಕೆಲಸದ ಮಹಿಳೆ ಮುಂದೆ ಬೆತ್ತಲಾಗಿ ಓಡಾಡಿ ಸೆಕ್ಸ್ ಗೆ ಒತ್ತಾಯಿಸಿದ ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆ ಸೆಕ್ಸ್ ಗೆ ಒಪ್ಪದಿದ್ದಾಗ ಆಕೆಯ ಮೇಲೆ ಕಳ್ಳತನದ ಆರೋಪ ಹೊರಿಸಲಾಗಿದ್ದು, ಇದರಿಂದ ನೊಂದ ಮಹಿಳೆ ಮನೆ ಮಾಲೀಕನ ಕೃತ್ಯದ ವಿಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆ ಮಾಲೀಕ ಪ್ರದೀಪ್ ನಾಯ್ಕ್ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರದೀಪ್ ನಾಯ್ಕ್ ಆಗಸ್ಟ್ 13ರಂದು ಸ್ಥಳೀಯ ಮಹಿಳೆಯನ್ನು ಅಡುಗೆ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದು, ಆಗಸ್ಟ್ 22 ರಂದು ಮೊದಲ ಸಲ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ನಂತರ ಆಕೆಯ ಮುಂದೆ ಬೆತ್ತಲಾಗಿ ಓಡಾಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಇದನ್ನು ಒಪ್ಪದ ಮಹಿಳೆ ಆತನ ಪತ್ನಿಗೆ ವಿಷಯ ತಿಳಿಸಿದ್ದಾರೆ. ಇದರಿಂದಾಗಿ ಆಕ್ರೋಶಗೊಂಡ ಪ್ರದೀಪ್ ನಾಯ್ಕ್ ಮನೆ ಕೆಲಸದ ಮಹಿಳೆ ಮೇಲೆ ಕಳ್ಳತನದ ಆರೋಪ ಹೊರಿಸಿದ್ದಾನೆ. ನಂತರ ಮತ್ತೆ ಅದೇ ವರ್ತನೆ ಮುಂದುವರೆಸಿದ್ದರಿಂದ ಮಹಿಳೆ ವಿಡಿಯೋ ಸಹಿತ ದೂರು ನೀಡಿದ್ದಾರೆ.