ನೈಜೀರಿಯಾ: ದಕ್ಷಿಣ ನೈಜೀರಿಯಾದ ಕೋಗಿ ರಾಜ್ಯದ ನೈಜರ್ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 26 ಜನರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.
ಇಬಾಜಿಯಿಂದ ವ್ಯಾಪಾರಿಗಳನ್ನು ಎಡೋ ರಾಜ್ಯದ ಇಲುಶಿಯಲ್ಲಿರುವ ಮಾರುಕಟ್ಟೆಗೆ ದೋಣಿ ಸಾಗಿಸುತ್ತಿದ್ದಾಗ ನದಿಯಲ್ಲಿ ಉರುಳಿಬಿದ್ದಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
“ಈ ದುರದೃಷ್ಟಕರ ಘಟನೆಯಲ್ಲಿ ಕನಿಷ್ಠ 26 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ” ಎಂದು ಕೋಗಿ ರಾಜ್ಯ ಮಾಹಿತಿ ಆಯುಕ್ತ ಕಿಂಗ್ಸ್ಲಿ ಫೆಮಿ ಫ್ಯಾನ್ವೊ ತಿಳಿಸಿದ್ದಾರೆ.
ಕಳೆದ ತಿಂಗಳು, ನೈಜರ್ ರಾಜ್ಯದಲ್ಲಿ ಜನದಟ್ಟಣೆಯ ದೋಣಿಯೊಂದು ಮರದ ಬುಡಕ್ಕೆ ಡಿಕ್ಕಿ ಹೊಡೆದು ಕನಿಷ್ಠ 60 ಜನರು ಮುಳುಗಿದ್ದರು.