ಮಧ್ಯಪ್ರದೇಶ : ಸರ್ಕಾರಿ ಕೆಲಸ ಉಳಿಸಿಕೊಳ್ಳಲು ದಂಪತಿಗಳು ಮಗುವನ್ನು ಕಾಡಿಗೆ ಎಸೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದಲ್ಲಿ 2 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸರ್ಕಾರಿ ನೌಕರಿ ಕಳೆದುಕೊಳ್ಳುತ್ತಾರೆ. ಈಗಾಗಲೇ ಮೂವರು ಮಕ್ಕಳಿದ್ದು, ಇನ್ನೊಂದು ಆದರೆ ತಾವು ಕೆಲಸ ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ ಕಂದಮ್ಮನನ್ನು ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದರು. ಶಿಶುವಿನ ತಂದೆ ಸರ್ಕಾರಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು.
ಶಿಶುವಿನ ಅಳುವಿಕೆಯಿಂದ ಎಚ್ಚರಗೊಂಡ ಗ್ರಾಮಸ್ಥರು ಮಗುವನ್ನು ನೋಡಿ ರಕ್ಷಿಸಿದ್ದಾರೆ.. ನಡುಗುತ್ತಿದ್ದ ಶಿಶು ಜೀವಂತವಾಗಿರುವುದನ್ನು ನೋಡಿದ ಗ್ರಾಮಸ್ಥರು ಮಗುವನ್ನು ಕಾಪಾಡಿದ್ದಾರೆ. ಸರ್ಕಾರಿ ಶಿಕ್ಷಕರಾದ ತಂದೆ ಬಬ್ಲು ದಾಂಡೋಲಿಯಾ ಮತ್ತು ತಾಯಿ ರಾಜಕುಮಾರಿ ದಾಂಡೋಲಿಯಾ ತಮ್ಮ ಮಗುವನ್ನು ನಾಲ್ಕನೇ ಮಗುವಾಗಿದ್ದರಿಂದ ತ್ಯಜಿಸಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಉದ್ಯೋಗವನ್ನು ನಿರ್ಬಂಧಿಸುವ ಸರ್ಕಾರಿ ನಿಯಮಗಳ ಅಡಿಯಲ್ಲಿ ಕೆಲಸ ಕಳೆದುಕೊಳ್ಳುವ ಭಯಭೀತರಾದ ದಂಪತಿಗಳು ಈಗಾಗಲೇ ಮೂರು ಮಕ್ಕಳನ್ನು ಹೊಂದಿದ್ದರಿಂದ ಗರ್ಭಧಾರಣೆಯನ್ನು ರಹಸ್ಯವಾಗಿಟ್ಟರು.