ಬೆಂಗಳೂರು: ಹೊಂಬಾಳೆ ಫಿಲಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಇಂದು ದೇಶ, ವಿದೇಶಗಳಲ್ಲಿ ಬಿಡುಗಡೆಯಾಗಲಿದೆ.
ಇಂದು ಬೆಳಗ್ಗೆ 6.30 ರಿಂದಲೇ ಬೆಂಗಳೂರಿನ ಗಾಂಧಿನಗರದ ಮೂರು ಥಿಯೇಟರ್ ಗಳಲ್ಲಿ ಪ್ರದರ್ಶನ ಆರಂಭವಾಗಿದೆ. ನಿನ್ನೆ ಪ್ರೀಮಿಯರ್ ಶೋ ಕಣ್ತುಂಬಿಕೊಂಡ ಪ್ರೇಕ್ಷಕರು ‘ಕಾಂತಾರ ಚಾಪ್ಟರ್ 1’ ಅದ್ಭುತ ಚಿತ್ರವೆಂದು ಬಣ್ಣಿಸಿದ್ದಾರೆ.
ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಇಂದು ಕರ್ನಾಟಕದ 350ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಇಂದು ದೇಶಾದ್ಯಂತ 7 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. 125 ಕೋಟಿ ರೂಪಾಯಿ ಬಜೆಟ್ ನಲ್ಲಿ ‘ಕಾಂತಾರ ಚಾಪ್ಟರ್ 1’ ನಿರ್ಮಾಣ ಮಾಡಲಾಗಿದೆ
ಮೊದಲ ದಿನದ ಪ್ರದರ್ಶನಗಳು ಹೌಸ್ ಫುಲ್ ಆಗಿವೆ. 30ಕ್ಕೂ ಹೆಚ್ಚು ದೇಶಗಳಲ್ಲಿ 7 ಭಾಷೆಗಳಲ್ಲಿ ‘ಕಾಂತಾರ ಚಾಪ್ಟರ್ 1’ ತೆರೆ ಕಾಣಲಿದೆ. ಪ್ರೀಮಿಯರ್ ಶೋ ನೋಡಿದ ಪ್ರೇಕ್ಷಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಒಂದು ವಾರದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ‘ಕಾಂತಾರ ಚಾಪ್ಟರ್ 1’ ಹವಾ ಸೃಷ್ಟಿಸಿದೆ.