BIG NEWS: ಯುವತಿ ಮೇಲೆ ಗ್ಯಾಂಗ್ ರೇಪ್: ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಗಳು ಅರೆಸ್ಟ್

ಚೆನ್ನೈ: ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದ ಇಬ್ಬರು ಪೊಲೀಸರನ್ನು ಬಂಧಿಸಿರುವ ಘಟನೆ ತಮಿಳುನಾಡಿನ ತಿರುವನ್ನಾಮಲೈ ನಲ್ಲಿ ನಡೆದಿದೆ.

19 ವರ್ಷದ ಯುವತಿ ಮೇಲೆ ತಿರುವನ್ನಾಮಲೈನಲ್ಲಿರುವ ಜಿಲ್ಲಾ ಪೂರ್ವ ಪೊಲೀಸ್ ಠಾಣೆಗೆ ಸೇರಿದ ಇಬ್ಬರು ಪೊಲೀಸರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎನ್ನಾಲಾಗಿದೆ.

ಬಂಧಿತರನ್ನು ಕಾನ್ಸ್ ಟೇಬಲ್ ಸುಂದರ್ ಹಾಗೂ ಸುರೇಶ್ ರಾಜ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಾನ್ಸ್ ಟೇಬಲ್ ಗಳು ತಪಾಸಣೆಗಾಗಿ ಟ್ರಕ್ ತಡೆದಿದ್ದರು. ಈ ವೇಳೆ ಟ್ರಕ್ ನಲ್ಲಿ ಓರ್ವ ವ್ಯಕ್ತಿ ಹಾಗೂ ಇಬ್ಬರು ಮಹಿಳೆಯರು ಪ್ರಯಾಣಿಸುತ್ತಿದ್ದರು.

ತಪಾಸಣೆಗಾಗಿ ವಾಹನ್ ನಿಲ್ಲಿಸಿದ್ದ ಕಾನ್ಸ್ ಟೇಬಲ್ ಗಳು 19 ವರ್ಷದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದಾರೆ. ಸಂತ್ರಸ್ತ ಯುವತಿ ಆಘಾತದಲ್ಲಿಯೇ ನಡೆದುಕೊಂಡು ತನ್ನ ಗ್ರಾಮವನ್ನು ತಲುಪಿದ್ದಾಳೆ. ನಿವಾಸಿಗಳು ಯುವತಿಗೆ ಸಹಾಯ ಮಾಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಜಿಲ್ಲಾ ಮಹಿಳಾ ಠಾಣೆ ಪೊಲೀಸರು ಆರೋಪಿಗಳಾದ ಸುಂದರ್ ಹಾಗೂ ಸುರೇಶ್ ನನ್ನು ಬಂಧಿಸಿದ್ದಾರೆ. ಅಲ್ಲದೇ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read