ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಲಭ್ಯವಿರುವ ಕಾರ್ಯಭಾರಕ್ಕೆ ಅನುಗುಣವಾಗಿ ಅಕ್ಟೋಬರ್ 10ರೊಳಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಅತಿಥಿ ಉಪನ್ಯಾಸಕರಿಗೆ ಉನ್ನತ ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಕರ್ತವ್ಯಕ್ಕೆ ವರದಿ ಮಾಡಿಕೊಂಡ ಅತಿಥಿ ಉಪನ್ಯಾಸಕರ ಮಾಹಿತಿಯನ್ನು ಅದೇ ದಿನ ಸಂಜೆಯೊಳಗೆ ಉನ್ನತ ಶಿಕ್ಷಣ ಇಲಾಖೆ ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. 2025- 26 ನೇ ಸಾಲಿನಲ್ಲಿ ಮುಂದುವರೆದಿರುವ ಅತಿಥಿ ಉಪನ್ಯಾಸಕರು ಅರ್ಜಿಯಲ್ಲಿ ನೀಡಿರುವ ಮಾಹಿತಿ ವಿವರ, ಅವರ ದಾಖಲಾತಿಗಳನ್ನು ಪ್ರಾಂಶುಪಾಲರು ಪರಿಶೀಲನೆ ಮಾಡಿ ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳಬೇಕು. ಈ ಪರಿಶೀಲನೆಯಲ್ಲಿ ಯಾವುದಾದರೂ ಮಾಹಿತಿ ತಾಳೆಯಾಗದಿದ್ದಲ್ಲಿ ಅಂತವರನ್ನು ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳದೆ ತಿರಸ್ಕರಿಸುವಂತೆ ಸೂಚನೆ ನೀಡಲಾಗಿದೆ.